Banner Ad

ಸುದ್ದಿ ಕನ್ನಡ ವಾರ್ತೆ

ಉತ್ತರ ಕನ್ನಡ ದ ಮಾನ್ಯ ಜಿಲ್ಲಾಧಿಕಾರಿ ಗಳು ಜೋಯಿಡಾ ತಾಲೂಕಿನ ಬಗ್ಗೆ ಇಲ್ಲಿನ ಜನರ ಬಗ್ಗೆ ಗಮನ ಹರಿಸಬೇಕು, ಎಂದು ಸಾರ್ವಜನಿಕ ರು ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Banner Ad

ಮಳೆಗಾಲ ಬಂತೆಂದರೆ ಸಾಕು ವಿದ್ಯುತ ಇರೋದಿಲ್ಲ, ವಿದ್ಯುತ್ ಇಲ್ಲ ಎಂದರೆ ಜನತೆಗೆ ಕುಡಿಯಲು ನೀರು ಬರೋದಿಲ್ಲ, ಕಚೇರಿ ಗಳಲ್ಲಿ ಕೆಲಸ ನಡೆಯೋದಿಲ್ಲ, ದೂರವಾಣಿ ಬರೋದೇ ಇಲ್ಲ, ಈಗ ಗುಡ್ಡ ಏರಿದರೆ ಬರೋ ದೂರವಾಣಿ ಗಳು, ಬೇರೆ ತಾಲೂಕಿನ, ಬೇರೆ ರಾಜ್ಯದ ದೂರವಾಣಿ ಗಳು, ಇಲ್ಲಿ ಸ್ಥಿರ ದೂರವಾಣಿ ಗಳು ವಿದ್ಯುತ್ ಇಲ್ಲ ಎಂದರೆ ನಿಂತು ಬಿಡುತ್ತವೆ, ಸರಕಾರದ ಎಲ್ಲ ಕೆಲಸಗಳಿಗೂ ಓ ಟಿ ಪಿ ಗಳು ಬೇಕು ಆದರೆ ತಾಲೂಕಿನಲ್ಲಿ ವಿವಿಧ ಕೆಲಸ ಕಾರ್ಯ ಗಳಿಗೆ ಓಟಿಪಿ ಪಡೆಯಲು ದಿನಗಟ್ಟಲೆ ಕಾಯಬೇಕು, ಇದಕ್ಕೊಂದು ಪರಿಹಾರ ಮಾಡಿಕೊಡಿ, ಗಣೇಶ್ ಗುಡಿಯಿಂದ ಬಂದಿರುವ ವಿದ್ಯುತ್ ಲೈನ್ ವರ್ಷ ದಲ್ಲಿ ಹಲವಾರು ಬಾರಿ ಗಿಡ ಮರ ಗಳು ಬಿದ್ದು ಹಾಳಾಗುತ್ತಿದೆ, ಇದನ್ನು ಅಂಡರಗ್ರೌಂಡ್ ಮಾಡುವ ಬಗ್ಗೆ ಪ್ರಸ್ತಾವನೆ ಮಾಡಿಕೊಡಿ, ಸರಕಾರದ ಉಚಿತ ಯೋಜನೆ ಜಾರಿ ಯಾಗಬೇಕಾದರೆ ಓಟಿಪಿ ಪಡೆಯಲು, ವಿದ್ಯುತ್ ಇರೋದಿಲ್ಲ, ವಿದ್ಯುತ್ ಭಾಗ್ಯ ಪಡೆಯಲು ತಿಂಗಳಲ್ಲಿ ಹಲವುದಿನ ವಿದ್ಯುತ್ ಇರೋದಿಲ್ಲ, ತಾಲೂಕಿನ ಜನತೆಗೆ ಸೋಲಾರ್ ಭಾಗ್ಯ ವನ್ನಾದರೂ ಮಾಡಿಕೊಡಿ, ಗ್ರಾಮೀಣ ಭಾಗಗಳಿಗೆಲ್ಲ ಬಸ್ ಹೋಗಬೇಕಾದರೆ ತಾಲೂಕಿನಲ್ಲಿ ಬಸ್ ಡಿಪೋ ಬೇಕು, ಜೋಯಿಡಾ ದಲ್ಲಿ ಬಸ್ ಡಿಪೋ ಇಲ್ಲ ಒಂದು ಬಸ್ ಡಿಪೋ ಮಾಡಿಕೊಡಿ,, ತಾಲೂಕು ತುಂಬಾ ವಿಸ್ತಾರ ವಾಗಿದೆ ಅಣಶಿ ಯಿಂದ ಅನಮೋಡ್ ವರೆಗೆ ಹೋಗಬೇಕಾದರೂ 200,ಕಿ ಮೀ ಹೋಗಬೇಕು ಹಾಗಾಗಿ ವಿಸ್ತಾರ ವಾದ ತಾಲೂಕಿಗೆ ಇರಬೇಕಾದ ಒಂದು ನ್ಯಾಯಾಲಯವೇ ಇಲ್ಲ.

 

ದಯಮಾಡಿ ನ್ಯಾಯಾಲಯ ಮಂಜೂರಿ ಮಾಡಿಕೊಡಿ, ತಾಲೂಕಿನ ಕಾಳಿ ನದಿಯಿಂದ ಹೊರ ಜಿಲ್ಲೆಗಳಿಗೆ ನೀರು ಹೋಗುತ್ತಿದೆ, ಅದರಂತೆ ತಾಲೂಕಿನ 16 ಗ್ರಾಮ ಪಂಚಾಯತ ಗಳಿಗೂ ನೀರು ಕೊಡುವ ಯೋಜನೆ ಮಾಡಿ ಕೊಡಿ.ತಾಲೂಕಿನಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರ ಕೊರತೆ ಯಿಂದ ಪಾಲಕರು ಮಕ್ಕಳನ್ನು ಹೊರ ತಾಲೂಕಿಗೆ ಕಳಿಸುತ್ತಿದ್ದಾರೆ,ತರಬೇತಿ ಇಲ್ಲದ ಗೌರವ ಶಿಕ್ಷಕರ ನೇಮಕ ದಿಂದ ಅವರು ರೋಸಿಹೋಗಿದ್ದಾರೆ, ತಾಲೂಕಿಗೆ ಬೇಕಾದ ಶಿಕ್ಷಕರ ಮಂಜೂರಾತಿ ಮಾಡಿ ಕೊಡಿ. ಇನ್ನಿತರ ಸಮಸ್ಯೆ ಗಳಿಗೆ ಹಿಂದುಳಿದ ತಾಲೂಕಿನ ಸಮಸ್ಯೆ ಗಳನ್ನು ಸರಕಾರದ ಗಮನಕ್ಕೆ ತಂದು ಇಲ್ಲಿನ ಜನರು ಬದುಕಲು ಇರುವ ಸಮಸ್ಯೆ ಬಗೆಹರಿಸಿ ಕೊಡಿ,ಈ ಹಿಂದೆ ಜಿಲ್ಲಾಧಿಕಾರಿ ಗಳಾಗಿದ್ದ ಗಂಗೂ ಬಾಯಿ ಮಾನಕರ ಅವರು 2023ರ ಡಿಸೇಂಬರ್19 ರಂದು ತಾಲೂಕಿನ ಹಿಂದುಳಿದ ಗ್ರಾಮ ಡಿಗ್ಗಿಯಲ್ಲಿ ಜನತಾ ದರ್ಶನ ಸಭೆ ಮಾಡಿ ಜನರ ಸಮಸ್ಯೆ ಆಲಿಸಿದ್ದರು, ಅದೇ ರೀತಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ನ ಕೂಡ ಸಭೆ ನಡೆಸಿದ್ದರು. ತಾಲೂಕಿನ ಸಮಸ್ಯೆ ಬಗೆ ಹರಿಸಲು ತಾವು ಕೂಡ ಒಂದು ಸಭೆ ನಡೆಸಿ ಅಗತ್ಯ ಕ್ರಮ ಕೈ ಕೊಳ್ಳ ಬೇಕಾಗಿ ಬೇಡಿಕೊಂಡಿದ್ದಾರೆ.

Banner Ad