ಸುದ್ದಿ ಕನ್ನಡ ವಾರ್ತೆ
ಮುಂಡಗೋಡ:ತಾಲೂಕಿನ ಹಾಗೂ ಜಿಲ್ಲೆಯ
ಹಿರಿಯ ಪತ್ರಕರ್ತ ಹಾಗೂ ಲೋಕಧ್ವನಿ ದಿನಪತ್ರಿಕೆಯ ಮಾಜಿ ಸಂಪಾದಕ ಪಿ.ಎಸ್. ಸದಾನಂದ (68) ಹೃದಯ ಸ್ತಂಭನದಿಂದ ನಿಧನರಾದರು. ಅವರು ಪತ್ನಿ, ಪುತ್ರಿ, ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೂಲತಃ ಮುಂಡಗೋಡ ತಾಲೂಕಿನ ನ್ಯಾಸರ್ಗಿ ಗ್ರಾಮದವರಾದ ಪಿ.ಎಸ್. ಸದಾನಂದ, ಮುಂಡಗೋಡಿನಲ್ಲಿ ಝರಾಕ್ಸ್ ಅಂಗಡಿ ನಡೆಸುತ್ತಿದ್ದರು. ಅಲ್ಲದೆ, ಅಲ್ಲಿನ ವರದಿಯನ್ನು ಲೋಕಧ್ವನಿಗೆ ಕಳುಹಿತ್ತಿದ್ದರು. ಇವರ ಬರವಣಿಗೆ ಗಮನಿಸಿದ ಲೋಕಧ್ವನಿ ಪತ್ರಿಕೆಯ ಸಂಸ್ಥಾಪಕ ಗೋಪಾಲಕೃಷ್ಣ ಆನವಟ್ಟಿ ಅವರು ಸದಾನಂದ ಅವರನ್ನು ಮುಂಡಗೋಡ ತಾಲೂಕಾ ವರದಿಗಾರರನ್ನಾಗಿ ನೇಮಿಸಿದರು.
ಬಳಿಕ ಆನವಟ್ಟಿ ಅವರು 1987ರಲ್ಲಿ ಸದಾನಂದ ಅವರನ್ನು ಉಪಸಂಪಾದಕರನ್ನಾಗಿ ನೇಮಿಸಿಕೊಂಡರು. ಅಲ್ಲಿಂದ ಸರಿ ಸುಮಾರು 37 ವರ್ಷಗಳ ಕಾಲ ಲೋಕಧ್ವನಿ ಪತ್ರಿಕೆಗೆ ಸೇವೆ ಸಲ್ಲಿಸಿದ್ದರು. ಸಂಪಾದಕರಾಗಿ ನಿವೃತ್ತಿಯನ್ನು ಹೊಂದಿದ್ದರು.
