ಸುದ್ದಿ ಕನ್ನಡ ವಾರ್ತೆ

ಮಹಾರಾಷ್ಟ್ರ  ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಮತ್ತು ಕೃಷ್ಣಾ ನದಿಯ ಉಪ ನದಿಗಳು ತುಂಬುತ್ತಿರುವದರಿಂದ ಮಹಾರಾಷ್ಟçದ ರಾಜಾಪೂರ ಬ್ಯಾರೇಜ್‌ನಿಂದ ಕಳೆದ ಮೂರು ದಿನಗಳ ಹಿಂದೆ ಸುಮಾರು ೪೫೦೦ ಕ್ಯುಸೆಕ್‌ನಷ್ಟು ಬಿಟ್ಟ ನೀರು ಸಮೀಪದ ಹಿಪ್ಪರಗಿಯ ಬ್ಯಾರೇಜ್‌ಗೆ ಬುಧವಾರದಿಂದ ತಲುಪುತ್ತಿದೆ.

ತೇರದಾಳ ಶಾಸಕ ಸಿದ್ದು ಸವದಿ ಇಂದು ಸಮೀಪ ನಿರ್ಮಾಣವಾಗುತ್ತಿರುವ ಮಹಿಷವಾಡಗಿ ಸೇತುವೆ ಕಾಮಗಾರಿ ನಂತರ ನದಿಯೊಳಗಿನ ನೀರು ಹರಿವಿನ ಪ್ರಮಾಣ ವೀಕ್ಷಣೆ ನಂತರ ಪತ್ರಿಕೆಯೊಂದಿಗೆ ಮಾತನಾಡಿ, ಮಹಾರಾಷ್ಟçದಿಂದ ಬಿಟ್ಟ ನೀರು ಇದೀಗ ಹಿಪ್ಪರಗಿ ಬ್ಯಾರೇಜ್‌ಗೆ ತಲುಪಿದೆ. ಇನ್ನಷ್ಟು ನೀರು ಬರುತ್ತಿರುವದರಿಂದ ಬೇಸಿಗೆ ದಿನಗಳಲ್ಲಿ ಜನರು ನೀರಿನ ಕೊಂಚ ಸಮಸ್ಯೆ ಎದುರಿಸುತ್ತಿರುವದರಿಂದ ನಿರಾಳತೆಗೆ ಕಾರಣವಾಗಿದೆಯೆಂದರು.

ಇನ್ನೆರಡು ದಿನಗಳಲ್ಲಿ ಹಿಪ್ಪರಗಿಯ ಡೆಡ್ ಸ್ಟೋರೇಜ್ ಭರ್ತಿಯಾಗುವ ಲಕ್ಷಣಗಳಿವೆ. ನೀರಿನ ಪ್ರಮಾಣ ಇದೇ ರೀತಿ ಹೆಚ್ಚಾದಲ್ಲಿ ರೈತರಿಗೆ ಹಾಗೂ ಜನ-ಜಾನುವಾರುಗಳಿಗೆ ಸಹಕಾರಿಯಾಗಲಿದೆಯೆಂದರು.
ಸೇತುವೆ ಕಾರ್ಯದಲ್ಲಿ ತೊಡಕಿಲ್ಲ: ಮಹಿಷವಾಡಗಿ ಸೇತುವೆಗೆ ಸಂಬAಧಿಸಿದ ಪಿಲ್ಲರ್ ನಂ.೭ ಮತ್ತು ೮ರ ನದಿಯೊಳಗಿನ ಕಾರ್ಯ ಪೂರ್ಣಗೊಂಡಿದೆ. ಇನ್ನೆರಡು ದಿನಗಳಲ್ಲಿ ೧೦ ಅಡಿಯಷ್ಟು ಮತ್ತೇ ಎತ್ತರಕ್ಕೆ ಪಿಲ್ಲರ್‌ಗಳು ನಿರ್ಮಾಣವಾದಲ್ಲಿ ನದಿಯೊಳಗೆ ನೀರಿದ್ದರೂ ಮುಂದಿನ ದಿನಗಳಲ್ಲಿ ಸೇತುವೆ ಕಾಮಗಾರಿ ಸರಾಗವಾಗಿ ನಡೆಯಲಿದೆಯೆಂದು ಶಾಸಕ ಸಿದ್ದು ಸವದಿ ಸ್ಪಷ್ಟಪಡಿಸಿದರು.

ಸೇತುವೆ ಕಾಮಗಾರಿ ವೀಕ್ಷಣೆ ಮಾಡಲಾಗಿದ್ದು, ಇನ್ನಷ್ಟು ಕಾರ್ಮಿಕರ ಹೆಚ್ಚಳದೊಂದಿಗೆ ಕಾಮಗಾರಿಗೆ ವೇಗ ನೀಡುವಂತೆ ತಾಕೀತು ಮಾಡಲಾಗಿದೆ. ದಿನಂಪ್ರತಿ ೪ ಅಡಿಗಳಷ್ಟು ಎತ್ತರದಲ್ಲಿ ಮೂರು ಪಿಲ್ಲರ್‌ಗಳ ಕಾರ್ಯ ಮಾಡುತ್ತಿರುವ ಗುತ್ತಿಗೆದಾರನಿಗೆ ನದಿಯೊಳಗೆ ನೀರು ಹೆಚ್ಚಾಗುವದರೊಳಗಾಗಿ ನದಿಯೊಳಗಿನ ಸೇತುವೆ ಸಂಬAಧಿತ ಕಾರ್ಯ ಮುಗಿಸಬೇಕೆಂದು ಒತ್ತಾಯಿಸಲಾಗಿದೆಯೆಂದು ಸವದಿ ತಿಳಿಸಿದರು.
ಡೆಡ್ ಸ್ಟೋರೇಜನ ಅಡಿಯಲ್ಲಿ ನೀರು: ಹಿಪ್ಪರಗಿ ಬ್ಯಾರೇಜ್‌ನಲ್ಲಿ ೦.೮ ಟಿಎಂಸಿಯಷ್ಟು ಡೆಡ್ ಸ್ಟೋರೇಜ್‌ನಲ್ಲಿ ಸದ್ಯ ಕೇವಲ ೦.೨ ಟಿಎಂಸಿಯಷ್ಟು ಮಾತ್ರ ನೀರಿದೆ. ಇನ್ನೂ ೦.೬ ಟಿಎಂಸಿಯಷ್ಟು ನೀರು ಗೇಟ್‌ನ ಕೆಳಭಾಗದಲ್ಲಿದೆ. ೫೨೪.೪೭ ಮೀ. ಎತ್ತರವಿರುವ ಹಿಪ್ಪರಗಿ ಬ್ಯಾರೇಜ್‌ನ ಡೆಡ್ ಸ್ಟೋರೇಜ್ ೫೧೬.೬೪ ಮೀ.ನಲ್ಲಿದೆ. ಇದೀಗ ನದಿಯೊಳಗಿನ ನೀರು ೫೧೪.೪ ಮೀನಲ್ಲಿದೆ.
ಇದೇ ಸಂದರ್ಭ ಸುರೇಶ ಅಕ್ಕಿವಾಟ, ಶ್ರೀಶೈಲ ಬೀಳಗಿ, ಚಿದಾನಂದ ಹೊರಟ್ಟಿ, ವಿಜಯ ಬಾಗೇವಾಡಿ, ಅಶೋಕ ರಾವಳ, ಯಲ್ಲಪ್ಪ ಕಟಗಿ, ಶ್ರೀಶೈಲ ಯಾದವಾಡ ಸೇರಿದಂತೆ ಅನೇಕರಿದ್ದರು.