Banner Ad

ಸುದ್ದಿ ಕನ್ನಡ ವಾರ್ತೆ
ಶಿರಸಿ: ಶಿರಸಿ ಬನವಾಸಿ ರಸ್ತೆಯಲ್ಲಿ ಶನಿವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಉಂಚಳ್ಳಿ ಗ್ರಾಮ ಪಂಚಾಯಿತ ಮಾಜಿ ಸದಸ್ಯ ಹಾಗೂ ವಿಘ್ನೇಶ್ವರ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ವಿಶ್ವೇಶ್ವರ ಮೋಹನ್ ಹೆಗಡೆ ಕಬ್ಬೆ ಸಾವನ್ನಪ್ಪಿದ್ದಾರೆ.

ಬೊಲೆರೋ ಹಾಗೂ ಬೈಕ್ ನಡುವೆ ಈ ಭೀಕರ ಅಪಘಾತ ಸಂಭವಿಸಿದೆ. ವಿಶ್ವೇಶ್ವರ ಹೆಗಡೆ ರವರು ಬೈಕ್ ಚಲಾಯಿಸುತ್ತಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಶ್ವೇಶ್ವರ ಹೆಗಡೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Banner Ad

ಶಿರಸಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Banner Ad