ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ :ಕಳಚೆಯ ಸಹ್ಯಾದ್ರಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಐದು ಜನ ಆಡಳಿತ ಮಂಡಳಿಯ ಸದಸ್ಯರು ಸನ್ 2025-26 ನೇ ಸಾಲಿನ ಲೆಕ್ಕಪತ್ರದಲ್ಲಿ ದೃಢೀಕರಣ ಪತ್ರವಿಲ್ಲದೇ ಮೋತ್ತವನ್ನು ನಮೂದಿಸಿರುವ ಕುರಿತು ತನಿ ಖೆ ನಡೆಸುವಂತೆ ಕೋರಿ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಬೆಂಗಳೂರು ರವರಿಗೆ ಮನವಿ ಸಲ್ಲಿಸಿದ್ದಾಗಿ ದಿನಾಂಕ 25-09-2026 ರ ಶುಕ್ರವಾರ ಸೋಶಿಯಲ್ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಕುರಿತು ಸರಿಯಾದ ಮಾಹಿತಿಯನ್ನು ಶೇರುದಾರ ಸದಸ್ಯರುಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಪತ್ರಿಕಾ ಪ್ರಕಟಣೆಯನ್ನು ನೀಡಿದೆ.
ನಮ್ಮ ಸಹಕಾರ ಸಂಘದ ಬೆಳವಣಿಗೆಯಲ್ಲಿ ಅನೇಕ ಹಿರಿಯ ಸಹಕಾರಿಗಳ ಪರಿಶ್ರಮವಿದೆ. ಸಾರ್ವಜನಿಕರು ನಮ್ಮ ಬಗ್ಗೆ ವಿಶ್ವಾಸ ಹೊಂದಿರುವದರಿಂದ ನಾವು ಯಲ್ಲಾಪುರ ಪಟ್ಟಣದಲ್ಲಿ ಶಾಖೆಯನ್ನು ಹಾಗೂ ಎ.ಪಿ.ಎಂ.ಸಿ ಯಲ್ಲಿ ಅಡಿಕೆ ದಲಾಲಿ ಸಹಿತ ಶಾಖೆಯನ್ನು ಮತ್ತು ಜೋಯಿಡಾದಲ್ಲಿ ವ್ಯಾಪಾರ ಕೇಂದ್ರವನ್ನು ನಡೆಸಲು ಸಾಧ್ಯವಾಗಿದೆ. ಯಾವುದೇ ಸಂಘ ಅಥವಾ ಬ್ಯಾಂಕುಗಳು ಸಾರ್ವಜನಿಕರ ಠೇವಣಾತಿಯಲ್ಲಿ ತನ್ನ ವ್ಯವಹಾರವನ್ನು ನಡೆಸುತ್ತವೆ. ಆದರೆ ಈ ರೀತಿಯ ತಪ್ಪು ಅಭಿಪ್ರಾಯ ಮಾಧ್ಯಮಗಳಲ್ಲಿ ಪ್ರಕಟವಾಗುವದರಿಂದ ಸಂಘದ ಹಿತಕ್ಕೆ ದಕ್ಕೆಯಾಗುತ್ತದೆ. ಸದರಿಯವರು ಪ್ರಸ್ತಾಪಿಸಿರುವ ವಿಷಂiÀi ಈ ವರ್ಷ ಹೊಸದಾಗಿ ಬಂದಿರುವುದಲ್ಲಾ. ಈ ಹಿಂದಿನಿಂದಲೂ ಮುಂದುವರಿದುಕೊಂಡು ಬಂದಿದ್ದು ಆ ಸಮಯದಲ್ಲಿ ಈ ನಿರ್ದೇಶಕರುಗಳು ವಿರೋಧವನ್ನು ವ್ಯಕ್ತಪಡಿಸಿಲ್ಲಾ. ಬರತಕ್ಕ ಬಡ್ಡಿಯ ಮೋತ್ತಗಳು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಬರಬೇಕಾಗಿದ್ದು ಈ ಬಗ್ಗೆ ಸನ್ 2016 ನೇ ವರ್ಷದಿಂದಲೂ ದಿ.ಕೆ.ಡಿ.ಸಿ.ಸಿ ಬ್ಯಾಂಕಿಗೆ ಪತ್ರ ವ್ಯವಹಾರ ಮಾಡುತ್ತಿದ್ದೇವೆ. ಮುಖತಃ ಬೇಟಿಯಾಗಿ ಮನವಿ ಸಲ್ಲಿಸಿರುತ್ತೇವೆ ಈ ವಿಷಯಗಳು ನಮ್ಮ ಸದಸ್ಯರಿಗೆ ತಿಳಿದಿದೆ. ಕೆ.ಡಿ.ಸಿ.ಸಿ ಬ್ಯಾಂಕಿನ ಪ್ರತಿನಿಧಿಯಾಗಿ ಬಂದಿರುವ ನಿರ್ದೇಶಕರು ನಾವು ಕೇಳಿದ ದಾಖಲೆಯನ್ನು ಪೂರೈಸುವ ಜವಾಬ್ದಾರಿ ಸ್ಥಾನದಲ್ಲಿದ್ದು ಅವರು ಈ ವಿಷಯದಲ್ಲಿ ತನಿಖೆಗೆ ಒತ್ತಾಯಿಸುವದರ ಜೋತೆಗೆ ಸೋಶಿಯಲ್ ಮಾಧ್ಯಮಗಳಲ್ಲಿ ಈ ರೀತಿಯ ಸಂದೇಶವನ್ನು ಪ್ರಕಟಿಸಲು ಅವಕಾಶ ನೀಡಬಾರದಿತ್ತು. ಇನ್ನೂ ಸದರಿಯವರುಗಳು ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಸಂಘದ ವಾಸ್ತವಿಕ ಸಂಗತಿಯು ಈ ಕೆಳಗಿನಂತಿದೆ.
ದಿನಾಂಕ 16-01-2016 ರಂದು ಸಹಾಯಕ ನಿಬಂಧಕರು ಸಂಘದ ಮೇಲೆ ಕಲಂ 64 ರಡಿಯಲ್ಲಿ ತನಿಖೆಗೆ ಆದೇಶ ಮಾಡಿ ವಿಚಾರಣಾಧಿಕಾರಿಗಳು ದಿನಾಂಕ 31-05-2016 ರಂದು ವರದಿ ನೀಡಿದ್ದು ಇರುತ್ತದೆ. ಅದರಂತೆ ಅನುಪಾಲನಾ ವರದಿಯನ್ನು ಇಲಾಖೆಗೆ ಸಲ್ಲಿಸಿರುತ್ತೇವೆ. ದಿನಾಂಕ 08-08-2017 ರಂದು ಸಹಾಯಕ ನಿಬಂಧಕರು ಸಂಘದ ಮೇಲೆ ಕಲಂ 65(ಬಿ) ರಡಿಯಲ್ಲಿ ತನಿಖೆಗೆ ಆದೇಶ ಮಾಡಿ ದಿ.ಕೆ.ಡಿ.ಸಿ.ಸಿ ಬ್ಯಾಂಕಿನ ಸಿಬ್ಬಂದಿಯವರು 2002-03 ರಿಂದ 2016 ರವರೆಗೂ ಬಡ್ಡಿ ರಿಯಾಯಿತಿಗೆ ಸಂಬಂಧಿಸಿ ವಿಚಾರಣೆ ನಡೆಸಿ ವರದಿ ನೀಡಿ ಸೂಕ್ತ ಹೊಂದಾಣಿಕೆ ಜಮಾ- ಖರ್ಚು ಮಾಡಲು ಆದೇಶಿಸಿದಂತೆ ಸಂಘವು ಅನುಪಾಲನೆ ಮಾಡಿದ್ದು ಇರುತ್ತದೆ. ಕೆ.ಡಿ.ಸಿ.ಸಿ ಬ್ಯಾಂಕಿನ ನಿರ್ದೇಶನದಂತೆ ಸೂಕ್ತ ಜಮಾ- ಖರ್ಚು ಮಾಡಿಕೊಂಡ ನಂತರ ಈ ಮೋತ್ತ ಸರಕಾರಗಳಿಂದ ಬರುವುದು ಬಾಕಿ ಇರುತ್ತದೆ. ಪ್ರತಿ ವರ್ಷ ದೃಢೀಕರಣ ಪತ್ರ ನೀಡುವಂತೆ ಕೆ.ಡಿ.ಸಿ.ಸಿ ಬ್ಯಾಂಕಿನವರಿಗೆ ಪತ್ರ ವ್ಯವಹಾರ ಮಾಡುತ್ತಿದ್ದು ಸದರಿ ಬ್ಯಾಂಕಿನಿಂದ ಯಾವುದೇ ದೃಢೀಕರಣ ಪತ್ರ ಇದುವರೆಗೆ ಬಂದಿಲ್ಲ. ಆದರೆ ಕೆ.ಡಿ.ಸಿ.ಸಿ ಬ್ಯಾಂಕಿನ ಮೇಲ್ವಿಚಾರಕರು ದಿನಾಂಕ 01-01-2024 ರಿಂದ 31-03-2024 ರ ತ್ರೈಮಾಸಿಕ ಮೇಲ್ವಿಚಾರಣಾ ವರದಿಯನ್ನು ದಿನಾಂಕ 19-01-2026 ರಂದು ಸಂಘಕ್ಕೆ ನೀಡಿದ್ದು ಈ ವರದಿಯಲ್ಲಿ ಸದರಿ ಅಂಶಗಳಿಗೆ ಸಂಬಂಧಿಸಿ ಸೂಕ್ತ ಹೊಂದಾಣಿಕೆ ಜಮಾ-ಖರ್ಚು ಮಾಡಿಕೊಳ್ಳುವಂತೆ ಸೂಚನೆ ನೀಡಿರುತ್ತಾರೆ. ಅದರಂತೆ ಸಂಘದ ಆಡಳಿತ ಮಂಡಳಿಯು ದಿನಾಂಕ 16-02-2026 ರ ಸಭೆಯಲ್ಲಿ ನಿರ್ಣಯ 09(01) ರ ಪ್ರಕಾರ ವರದಿಯನ್ನು ಪರಿಶೀಲಿಸಿ ಚರ್ಚಿಸಿ ಅನುವು ಕಾಯ್ದಿರಿಸಲು ಸರ್ವಾನುಮತದ ನಿರ್ಣಯ ಕೈಗೊಂಡಿರುತ್ತದೆ. ತದ ನಂತರ ದಿನಾಂಕ 26-03-2026 ರ ಆಡಳಿತ ಮಂಡಳಿ ಸಭೆಯಲ್ಲಿ ಸದರಿ ನಿರ್ಣಯವನ್ನು ದೃಢೀಕರಿಸುವ ಸಂದರ್ಭದಲ್ಲಿ ಕೆಲವು ನಿರ್ದೇಶಕರುಗಳು ತಮ್ಮ ಅಭಿಪ್ರಾಯ ದಾಖಲಿಸುವಂತೆ ಪತ್ರ ನೀಡಿದ್ದು ಸದರಿಯವರ ಅಭಿಪ್ರಾಯವನ್ನು ಠರಾವಿನಲ್ಲಿ ದಾಖಲಿಸಲಾಗಿದೆ. ತದ ನಂತರ ದಿನಾಂಕ 26-08-2026 ರಂದು ಜರುಗಿದ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸದಸ್ಯರು ಈ ವಿಷಯ ಪ್ರಸ್ತಾಪಿಸಿದ್ದು ಸಭೆಯಲ್ಲಿ ಈ ವಿಷಯ ಚರ್ಚೆಯಾಗಿ ಅನುವು ತೆಗೆದಿರಿಸಿರುವುದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟು ಸದರಿ ಮೋತ್ತವನ್ನು ಹೊಂದಾಣಿಕೆ ಜಮಾ-ಖರ್ಚು ಮಾಡಲು ಸರ್ವಾನುಮತದಿಂದ ಒಪ್ಪಿಗೆ ನೀಡಿರುತ್ತದೆ. ಸಂಘವು ಪ್ರತಿಯೊಂದು ಸಂದರ್ಭದಲ್ಲಿಯೂ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿದ್ದು ಸಂಘದ ಸದಸ್ಯರು ಈ ಬಗ್ಗೆ ಆಂತಕಪಡಬೇಕಾಗಿಲ್ಲ. ಜಿಲ್ಲೆಯ ಹಲವಾರು ಸಹಕಾರಿ ಸಂಘಗಳು ಈ ಬಗ್ಗೆ ಅನುವು ತೆಗೆದಿರಿಸಿದ್ದು ಮತ್ತು ಕೆಲವೊಂದು ಸಹಕಾರ ಸಂಘಗಳು ಈಗಾಗಲೇ ಹೊಂದಾಣಿಕೆ ಜಮಾ-ಖರ್ಚು ಮಾಡಿಕೊಂಡಿವೆ.
ಸಂಘದ ಆರ್ಥಿಕ ಹಿತದೃಷ್ಟಿಯಿಂದ ಅನುವು ಕಲ್ಪಿಸಲಾಗಿದೆ ವಿನಃ ಬೇರೆಯ ಯಾವುದೇ ಉದ್ದೇಶಕ್ಕೆ ಅಲ್ಲ. ಇನ್ನೂ ಬರತಕ್ಕ ಬಡ್ಡಿ ಕೆ.ಡಿ.ಸಿ.ಸಿ ಬ್ಯಾಂಕ್ ಎಂಬ ವಿಷಯಕ್ಕೆ ಸಂಬಂಧಿಸಿದ ಮೋತ್ತದ ಪೈಕಿ ರೂ. 12,26,564-00 ಗಳು ರಿಜರ್ವ್ ಪಂಡ್ ಬಡ್ಡಿಯಾಗಿರುತ್ತದೆ.ಉಳಿದ ರೂ. 6,28,110-00 ಮಾರ್ಚ್ ಅಂತ್ಯಕ್ಕೆ ಕೆ.ಡಿ.ಸಿ.ಸಿ ಬ್ಯಾಂಕಿನಲ್ಲಿ ಗುಂತಾಯಿಸಿದ ಠೇವುಗಳ ಮೇಲೆ ಕಾಯ್ದಿರಿಸಿದ ಬಡ್ಡಿಯಾಗಿದೆ. ಸದರಿ ಬಡ್ಡಿಗಳ ಪೈಕಿ ರಿಜರ್ವ್ ಪಂಡ್ ಬಡ್ಡಿ ರೂ. 1226564-00 ದಿನಾಂಕ 04-04-2026 ಕ್ಕೆ ಜಮಾ ಬಂದಿರುತ್ತದೆ. ಈ ಬಗ್ಗೆ ಸರಿಯಾಗಿ ವಿಷಯವನ್ನು ತಿಳಿದುಕೊಳ್ಳದೇ ಸಂಘದ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಸಂಘವು ಪ್ರಾಮಾಣಿಕವಾಗಿ ವ್ಯವಹರಿಸುತ್ತಿದ್ದು ಸಂಘದ ಸದಸ್ಯರು ಹಾಗೂ ಗ್ರಾಹಕರು ಮತ್ತು ಹಿತೈಷಿಗಳು ಈ ವಿಷಯದಲ್ಲಿ ಆಂತಕಪಡಬೇಕಾಗಿಲ್ಲ. ನಿಮ್ಮೆಲ್ಲರ ಸಹಕಾರದಿಂದ ಸಂಘವು ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗದೆ.
