ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಡ್ಲಿ ರಸ್ತೆಯ ಪ್ರಧಾನಿ ಹತ್ತಿರ ರಸ್ತೆ ಬದಿಯಲ್ಲಿ ಕರಡಿಯೊಂದು ಪ್ರತ್ಯಕ್ಷವಾದ ಘಟನೆ ಗುರುವಾರ ನಸುಕಿನ ವೇಳೆ ನಡೆದಿದೆ.
ತಾಲೂಕಿನಲ್ಲಿ ಅಲ್ಲಲ್ಲಿ ಆಗೊಮ್ಮೆ ಈಗೊಮ್ಮೆ ಎಂಬಂತೆ ಹುಲಿ, ಆನೆ, ಕರಡಿ, ಚಿರತೆ ದರ್ಶನ ಭಾಗ್ಯವನ್ನು ನೀಡಿದರೆ, ಜಿಂಕೆ, ನವಿಲು, ಕಾಡುಕೋಣ, ಕಾಡೆಮ್ಮೆ ಸಾಮಾನ್ಯವಾಗಿ ಕಾಣಸಿಗುತ್ತದೆ.ಇದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಓಂಕಾರ್ ಅವರು ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿ, ಕರಡಿಯ ಚಲನವಲನವನ್ನು ತಮ್ಮ ಮೊಬೈಲ್ ಕ್ಯಾಮರ್ ದಲ್ಲಿ ಸೆರೆ ಹಿಡಿದಿದ್ದಾರೆ.
ಆಹಾರವನ್ನರಸಿ ಬರುವ ವನ್ಯಪ್ರಾಣಿಗಳ ಬಗ್ಗೆ ಸ್ಥಳೀಯ ಜನತೆ ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಕಾಳಜಿಯನ್ನು ವಹಿಸಬೇಕಾಗಿದೆ.
