ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್.ಡಿ.ಎ ಬೆಂಬಲಿತ ನಾಲ್ವರು ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದು, ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಎಸ್. ವಿ. ಸಂಕನೂರ ಅವರು ಅಭೂತಪೂರ್ವ ಗೆಲುವು ದಾಖಲಿಸಿರುವುದು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಲ್ಲಿ ಅಪಾರ ಸಂತಸ, ಸಂಭ್ರಮ ಹಾಗೂ ಹೆಮ್ಮೆಯನ್ನು ಮೂಡಿಸಿದೆ.
ಈ ಐತಿಹಾಸಿಕ ಗೆಲುವಿನ ಸಂಭ್ರಮವನ್ನು ಜೋಯಿಡಾದಲ್ಲಿ *ಭಾರತೀಯ ಜನತಾ ಪಾರ್ಟಿ* ವತಿಯಿಂದ ಅದ್ಧೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ *ಅರುಣ್ ಕಾಮ್ರೇಕರ, ಸಂತೋಷ್ ಸಾವಂತ್, ಸುಭ್ರಯ್ ಹೆಗಡೆ, ಚಂದ್ರಶೇಖರ ಸಾವರ್ಕರ್, ಅಜಿತ್ ಮೀರಾಶಿ, ಆರ್ ವಿ ದಾನಗೇರಿ ಅವರು, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಮತ ನೀಡಿದ ಮತದಾರ ಬಂದುಗಳಿಗೆ ನನ್ನ ಮತ್ತು ಪಕ್ಷದ ವತಿಯಿಂದ ಅನಂತ ಅನಂತ ಧನ್ಯವಾದಗಳು ಮತ್ತು. ಈ ಗೆಲುವಿಗೆ ಶ್ರಮಿಸಿದ ಪಕ್ಷದ ಎಲ್ಲಾ ಪದಾಧಿಕಾರಿಗಳು, ಘಟನಾಯಕರು, ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಸಮರ್ಪಿತ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.ಹಾಗೂ ಕಾರ್ಯಕರ್ತರ ಸಂಘಟಿತ ಪರಿಶ್ರಮ, ನಿಷ್ಠೆ ಹಾಗೂ ಸಮರ್ಪಣಾ ಮನೋಭಾವವೇ ಪಕ್ಷದ ಗೆಲುವಿನ ಹಿಂದಿನ ಪ್ರಮುಖ ಶಕ್ತಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಿದ್ದು ಜೊಕೇರಿ,ಶೋಭಾ ಎಲ್ಲೆಕರ. ಅಂಕಿತ ಗಾವಡಾ. ಲಕ್ಷ್ಮಿ ಬಾಲಕೇರ. ಸಂದೀಪ ಗವಡಾ. ಬಾಬುರಾವ್ ನಾಗೋಡಾ. ದಿಗಂಬರ್ ದೇಸಾಯಿ. ಬಾಬು ಜೋಸೆಫ್. ಅನಿಲ್ ಪಟ್ಟೆ. ಸೋಮಣ್ಣ ಹನುಲ್ಕರ್. ಪ್ರವೀಣ್ ದೇಸಾಯಿ. ಸಮೀರ ತವಡ್ಕರ. ಗಜಾ ಮಿರಾಶಿ. ಸುರೇಶ್ ಕೋಟೆಕಲ್. ವಿಷ್ಣು ಸಾವಂತ. ವಿಷ್ಣು ಬಿರಂಗತ, ಪ್ರಭಾಕರ್ ದೇಸಾಯಿ, . ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದರು.
