Banner Ad

ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ಜೋಯಿಡಾ ಹಾಗೂ ರಾಮನಗರದ ಕೆಲವು ಭಾಗಗಳಲ್ಲಿ ಮಧ್ಯಾಹ್ನ,ಸಂಜೆಯ ವೇಳೆ ಗುಡುಗು,ಸಿಡಿಲು,ಮಿಂಚಿನೊಂದಿಗೆ ಮಳೆಯಾದ ವರದಿಯಾಗಿದೆ.

Banner Ad

 

ಈಗಾಗಲೇ ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆ ಆದ ಸಂದರ್ಭದಲ್ಲಿ ಹಿಂಗಾರು ಮಳೆಯು ಉತ್ತಮವಾಗಿ ಆಗಬೇಕಿದೆ. ಕಳೆದ ವರ್ಷ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆದ ಕಾರಣ ಅಡಿಕೆಗೆ ಕೊಳೆ ರೋಗ ಬಂದಿತ್ತು,ಈ ಬಾರಿ ಮುಂಗಾರಿನ ಮಳೆ ಕಡಿಮೆ ಆದ ಪರಿಣಾಮ ಭತ್ತದ ಬೆಳೆಗಾರರು ತೊಂದರೆ ಅನುಭವಿಸಬೇಕಾಗಿದೆ. ರಾಜ್ಯ ಸರ್ಕಾರವು ಬರಪೀಡಿತ ತಾಲೂಕಗಳ ಹೆಸರಿನ ಪಟ್ಚಿಯಲ್ಲಿ ಜೋಯಿಡಾ ತಾಲೂಕನ್ನು ಸೇರಿಸಿರುವುದು ಬೆಳೆಗಾರರಿಗೆ ತುಸು ನೆಮ್ಮದಿಯ ವಿಚಾರವಾಗಿದೆ. ಹಗಲು-ರಾತ್ರಿಯ ವೇಳೆ ಸೆಕೆಯಿಂದ ತತ್ತರಿಸಿದ ಜನತೆಗೆ ಸ್ವಲ್ಪ ನೆಮ್ಮದಿಯ ವಾತಾವರಣ ನಿರ್ಮಾಣ ಮಾಡಿದೆ.

ಈಗಾಗಲೇ ಮುಂಗಾರಿನ ಮಳೆ ವಾಡಿಕೆಗಿಂತ ಕಡಿಮೆ ಆದ ಪರಿಣಾಮ ಭತ್ತದ ಬೆಳೆಗೆ ನೀರಿಲ್ಲದೇ ತೊಂದರೆ ಆಗಿದೆ,ಹಿಂಗಾರು ಉತ್ತಮ ಆದರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ಸ್ವಲ್ಪ ಮಟ್ಟಿಗೆ ತಪ್ಪಲಿದೆ .(ಗಣೇಶ. ಪಿ,ಕೃಷಿಕ).

Banner Ad