ಸುದ್ಧಿಕನ್ನಡ ವಾರ್ತೆ
ಪಣಜಿ: ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಬಳಸುವ ಲಿಪ್ಟನ ಕಟ್ಟಿಗೆ ಹಲಗೆಯು ಮೂರನೇಯ ಮಹಡಿಯ ಮೇಲಿಂದ ಕಾರ್ಮಿಕನೋರ್ವನ ತಲೆಯ ಮೇಲೆ ಬಿದ್ದು ಕರ್ನಾಟಕ ಮೂಲದ ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ಗೋವಾದ ವಾಸ್ಕೊ ಸಮೀಪದ ಜುವಾರನಗರದಲ್ಲಿ ನಡೆದಿದೆ.
ಮೃತ ಕಾರ್ಮಿಕನು ಉತ್ತರಕರ್ನಾಟಕ ಭಾಗದವನು ಎಂದು ಹೇಳಲಾಗುತ್ತಿದ್ದು ಹುಚ್ಚಪ್ಪ ಸೋನಾಕಪ್ಪ (50) ಎಂದು ಗುರುತಿಸಲಾಗಿದೆ. ಈತ ಗೋವಾದ ವಾಸ್ಕೊ ದಾಬೋಲಿಂ ನಲ್ಲಿ ವಾಸಿಸುತ್ತಿದ್ದ.
ಈ ಘಟನೆಗೆ ಸಂಬಂಧಿಸಿದಂತೆ ವೆರ್ಣ ಪೋಲಿಸರಿಂದ ಲಭ್ಯವಾದ ಮಾಹಿತಿಯ ಅನುಸಾರ- ಗೋವಾದ ಜುವಾರಿನಗರ ಬಳಿಯ ಎಂಇಎಸ್ ಕಾಲೇಜು ಬಳಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡದಲ್ಲಿ ಈ ಕಾರ್ಮಿಕ ಕೆಲಸ ನಿರ್ವಹಿಸುತ್ತಿದ್ದ. ತನ್ನ ಕೆಲಸದ ಸಮಯದಲ್ಲಿ ಒಂದು ಬದಿಯಿಂದ ಮತ್ತೊಂದು ಬದಿಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮೂರನೇಯ ಮಹಡಿಯ ಲಿಫ್ಟನಿಂದ ಮರದ ಹಲಗೆ ಈತನ ತಲೆಯ ಮೇಲೆ ಬಿತ್ತು ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಈ ಕಾರ್ಮಿಕನನ್ನು ಚಿಕಲಿಯ ಉಪಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಾರ್ಮಿಕ ಸಾವನ್ನಪ್ಪಿದ ಎನ್ನಲಾಗಿದೆ.
