ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ : ಗ್ರಾಮೀಣ ಭಾಗದ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದರ ಜೊತೆಗೆ ಜನರಲ್ಲಿ ಧಾರ್ಮಿಕಶೃಧ್ದೆಯನ್ನು ಮೂಡಿಸುವಲ್ಲಿ ಶಾರದಾ ಉತ್ಸವ ಸಮಿತಿ ನಿರಂತರವಾಗಿ ಶೃಮಿಸುತ್ತಾ ಬಂದಿದೆ ಎಂದು ಮಾವಿನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ ಹೇಳಿದರು.
ಅವರು ಲಕ್ಷ್ಮೀ ನರಸಿಂಹ ಯುವಕ ಸಂಘ ಕಳಚೆ ಹಾಗೂ ಶಾರದಾ ಉತ್ಸವ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡ ಶಾರದಾ ಉತ್ಸವ ದ ಸಾಂಸ್ಕೃತಿಕ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಮಾತನಾಡಿ, ಶಾರದಾ ಉತ್ಸವವನ್ನು ನಿರಂತರವಾಗಿ ಆಚರಿಸಿಕೊಂಡು ಬಂದು ಮಾದರಿಯಾಗಿದ್ದೀರಿ.ಎಲ್ಲರ ಸಹಭಾಗಿತ್ವ ಇದ್ದಾಗ ಇಂತದ್ದೊಂದು ಕಾರ್ಯ ಯಶಶ್ವೀಯಾಗಿ ಮಾಡಲು ಸಾಧ್ಯ ಎಂದರು.ಹಿರಿಯ ನ್ಯಾಯವಾದಿ ಜಿ.ಆರ್.ಹೆಗಡೆ ಮಾತನಾಡಿ ಇಲ್ಲಿಯ ಶಾರದಾ ಉತ್ಸವ ಸಮಿತಿಯ ಕಲಾತ್ಮಕ ಕೊಡುಗೆ ಅನನ್ಯವಾದುದು ಎಂದರು. ಸಂಕಲ್ಪ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಸಹಕಾರಿ ಉಮೇಶ ಭಾಗ್ವತ್ ಸಾಮಾಜಿಕಮುಖಂಡ ರವಿ ಹುಳ್ಸೆ ಉಪಸ್ಥಿತರಿದ್ದರು.ದಿಶಾ ಹೆಬ್ಬಾರ್ ಪ್ರಾರ್ಥಿಸಿದರು.ರಾಮಕೃಷ್ಣ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕಗೈದು ಕಾರ್ಯಕ್ರಮ ನಿರ್ವಹಿಸಿದರು.ನಾರಾಯಣ ಗಾಂವ್ಕಾರ್ ವಂದಿಸಿದರು.ರಂಜನಾ ಹುಳ್ಸೆ ಅವರಿಂದ ಹರಿಕಥೆ ನಡೆಯಿತು
