ಸುದ್ದಿ ಕನ್ನಡ ವಾರ್ತೆ
ಜೊಯಿಡಾ:ತಾಲೂಕಿನ ಖಾನಗಾಂವ ಹಾಗೂ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆಗಾಲದ ಸಮಯದಲ್ಲಿ ಹೆಚ್ಚಾಗಿ ಕಂಡುಬರುವ ಕಾಡುಹಣ್ಣು ಭೇಡಮುಡ್ಕ (Bhedmudka) ಎಂದು ಕೊಂಕಣಿ ಭಾಷೆಯಲ್ಲಿ ಕರೆಯಲಾಗುತ್ತದೆ.
ಈ ಹಣ್ಣು ದೊಡ್ಡ ದೊಡ್ಡ ಕಾಡುಬಳ್ಳಿಗಳಲ್ಲಿ ಬೆಳೆಯುತ್ತದೆ. ಈ ಬಳ್ಳಿಗಳು ಎತ್ತರದ ಮರಗಳನ್ನು ಆವರಿಸಿಕೊಂಡು ಬೆಳೆಯುವ ಸ್ವಭಾವ ಹೊಂದಿವೆ. ಹಣ್ಣುಗಳು ಹಳದಿ-ಕಿತ್ತಳೆ ಬಣ್ಣದಲ್ಲಿದ್ದು, ಹುಳಿಯಾದ ರುಚಿ ಹೊಂದಿರುತ್ತವೆ. ಸ್ಥಳೀಯರು ಇದನ್ನು ಕಾಡಿನಿಂದ ಸಂಗ್ರಹಿಸಿ ತಿನ್ನುತ್ತಾರೆ.
ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಖಾನಗಾಂವ ಸೇರಿದಂತೆ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಈ ಹಣ್ಣು ಸಮೃದ್ಧವಾಗಿ ದೊರೆಯುತ್ತದೆ. ಇದು ಪ್ರಕೃತಿಯ ಅಪರೂಪದ ಕಾಡಿನ ಕೊಡುಗೆಯಾಗಿದ್ದು, ಸ್ಥಳೀಯರ ಜೀವನ ಹಾಗೂ ಸಂಸ್ಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿದೆ.
