Banner Ad

ಸುದ್ದಿ ಕನ್ನಡ ವಾರ್ತೆ

ಭಟ್ಕಳ: ವೈದ್ಯಯಾಗಬೇಕೆನ್ನುವ ಕನಸಿಗೆ ಸೀಟು ಕೊಡಿಸುವುದಾಗಿ ನಂಬಿಸಿ ೨೩.೫೦ ಲಕ್ಷ ಹಣ ಪಡೆದು ಸೀಟು ಕೊಡಿಸದೇ, ವೈದ್ಯಕೀಯ ಕಾಲೇಜಿನ ನಕಲಿ ರಶೀಧಿಯನ್ನು ನೀಡಿ ವಂಚನೆಗೈದ ಕುರಿತು ಭಟ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Banner Ad

ನಗರದ ಮುಟ್ಟಳ್ಳಿಯ ನಿವಾಸಿ ರಾಜು ನಾಯ್ಕ ಎನ್ನುವವರು ತಮ್ಮ ಮಗಳಿಗೆ ವೈದ್ಯಕೀಯ ಪದವಿ ಪಡೆಯುವುದಕ್ಕೆ ವ್ಯವಸ್ಥೆ ಮಾಡುತ್ತಿದ್ದರೆನ್ನಲಾಗಿದೆ. ಇವರಿಗೆ ಪರಿಚಯವಾದ ಶೈಲೇಶಕುಮಾರ್ ಎನ್ನುವವನು ತಾನು ಎಂ.ಬಿ.ಬಿ.ಎಸ್. ಸರಕಾರಿ ಸೀಟು ಕೊಡಿವುದಾಗಿ ನಂಬಿಸಿ ಅವರಿಗೆ ಹಂತ ಹಂತವಾಗಿ ಹಣ ಪಡೆದು ಕೊನೆಗೂ ವಂಚಿಸಿರುವ ಕುರಿತು ದೂರು ದಾಖಲಾಗಿದೆ.

ವೈದ್ಯಕೀಯ ಪದವಿ ಪಡೆಯುವ ಇಚ್ಚೆಯಿಂದ ರಾಜು ನಾಯ್ಕ ಅವರ ಮಗಳಿಗೋಸ್ಕರ ಎಂ.ಬಿ.ಬಿ.ಎಸ್.ಸೀಟು ಅಗತ್ಯವಿರುವುದರಿಂದ ಫೇಸ್ಬುಕ್ ನೋಡುವಾಗ ಮಣಿಪಾಲ ಕಾಲೇಜಿನಲ್ಲಿ ಎಂಬಿಬಿಎಸ್. ಸೀಟು ಇರುವ ಕುರಿತು ತಿಳಿದು ಬಂದಿದೆ. ಆಗ ಫೇಸ್ಬುಕ್ ಮೂಲಕ ಸಾಯಿ ಕ್ರಪಾ ಎಜ್ಯುಕೇಶನ್ ಕನ್ಸಟೆನ್ಸಿ ಎನ್ನುವ ಎಜೆನ್ಸಿಯವರು ತಾಲು ಎಂಬಿಬಿಎಸ್ ಸೀಟು ಕೊಡಿಸುತ್ತೇವೆಂದು ಜಾಹೀರಾತು ನೀಡಿದ್ದನ್ನು ನಂಬಿದ ಇವರಿಗೆ ಶೈಲೇಶ ಎನ್ನುವ ವ್ಯಕ್ತಿ ನಿಮ್ಮ ಮಗಳಿಗೆ ಮಣಿಪಾಲದಲ್ಲಿ ಸರಕಾರಿ ಸೀಟ್ ಕೊಡಿಸುತ್ತೇನೆಂದು ನಂಬಿಸಿದ್ದಾನೆ. ಮೊದಲು ೧.೫ ಲಕ್ಷ ರೂಪಾಯಿಗಳನ್ನು ಪೋನ್ ಪೇ ಮೂಲಕ ಪಡೆದುಕೊಂಡಿದ್ದು ನಂತರ ನಂತರ ಎಸ್.ಬಿ.ಐ. ಬ್ಯಾಂಕ್‌ಗೆ ನೆಪ್ಟ್ ಮೂಲಕ ೧೦ ಲಕ್ಷ ರೂಪಾಯಿ, ನಂತನ ಕಸ್ತೂರ್ಬಾ ಕಾಲೇಜಿನಲ್ಲಿ ಹಣ ಪಾವತಿ ಮಾಡಿದ ನಕಲಿ ರಶೀಧಿಯನ್ನು ತೋರಿಸಿ ೧೨ ಲಕ್ಷ ರೂಪಾಯಿ ಹೀಗೆ ಒಟ್ಟೂ ೧೨.೫೦ ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರು ಸ್ವೀಕರಿಸಿಕೊಂಡಿರುವ ನಗರ ಠಾಣೆಯ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

Banner Ad