Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ :ಕಾರ್ಯಕ್ರಮ ಎಂದ ಕೂಡಲೇ ಜನರಿಗೆ ಒಂದು ಕುತೂಹಲ ವಿರುತ್ತದೆ ಎಲ್ಲಿಯ ಸಂಗೀತ ಗಾರರು ಎಲ್ಲಿಯ ವಾದ್ಯ ಮೇಳ ಬರುತ್ತದೆ ಎಂದು ಆದರೆ ಜೋಯಿಡಾ ದಲ್ಲಿ ಹೆಚ್ಚಾಗಿ ಜನರಿಗೆ ಗೊತ್ತಿದೆ ನಗರಿಯ ವಾದ್ಯ ಮತ್ತು ಸಂಗೀತ ಜೋಯಿಡಾ ದಲ್ಲಿ ಏನೇ ಕಾರ್ಯಕ್ರಮ ಗಳಿರಲಿ ಮದುವೆ, ಮುಂಜಿ ಗಳಿರಲಿ ನಗರಿಯ ವಾದ್ಯ ಮೇಳ ಇರಲೇ ಬೇಕು, ಕಳೆದ ಇಪ್ಪತ್ತು ವರ್ಷ ಗಳಿಂದ ನಗರಿಯ ವಾದ್ಯ ಮೇಳ ತಾಲೂಕಿನಲ್ಲಿ ಹೆಸರು ಮಾಡಿದೆ. ಮದುವೆ, ಇರಲಿ ಯಾವುದೇ ಮೆರವಣಿಗೆ ಇರಲಿ, ವಿಶೇಷ ಆಹ್ವಾನಿತರು ತಾಲೂಕಿಗೆ ಬರಲಿ, ನಗರಿಯ ವಾದ್ಯ ಮೇಳ ಇರಲೇ ಬೇಕು,

Banner Ad

ಯಾವ ಯಾವ ಕಾರ್ಯಕ್ರಮ ದಲ್ಲಿ ಹೇಗೆ ನುಡಿಸ ಬೇಕು, ಎಂದು ಕಾರ್ಯಕ್ರಮ, ಅನುಸರಿಸಿ, ವಾದ್ಯ ಮೇಳ ನಡೆಸುವ ಕಲೆ ಈ ಸಂಘಕ್ಕೆ ತಿಳಿದಿದೆ, ಹಾಗಾಗಿ ಹೆಚ್ಚಿನ ಜನರು ತಮ್ಮ ವಿವಿಧ ಕಾರ್ಯಕ್ರಮ ಗಳಿಗೆ ನಗರಿ ವಾದ್ಯ ಮೇಳಕ್ಕೆ ತಿಂಗಳುಗಳ ಮೊದಲೇ ಹೇಳುತ್ತಾರೆ, ತುಂಬಾ ಬಿಜಿ ಯಾದ ಈ ವಾದ್ಯ ಮೇಳ ಒಂದು ದಿನದಲ್ಲಿ ಎರಡುಮೂರು ಕಡೆ ಕೂಡ ಕಾರ್ಯಕ್ರಮ ನಡೆಸಿ ಕೊಟ್ಟಿದೆ, ಇದು ಕೂಡ ಈ ಮೇಳದ ಹೆಮ್ಮೆಯ ವಿಷಯ 2000 ನೇ ಇಸವಿ ಯಲ್ಲಿ ಅಂದಿನ ಜಿಲ್ಲಾ ಪಂಚಾಯತ್ ಸದಸ್ಯರು, ಜನಾನುರಾಗಿಗಳೂ ಆಗಿದ್ದ ವಿಲಾಸ್ ನಾಯ್ಕ್ ಅವರು ನಗರಿ ಸಂಘಕ್ಕೆ ವಾದ್ಯಮೇಳ ಗಳ ಸಾಮಗ್ರಿಗಳನ್ನು ವಿತರಿಸಿದ್ದರು, ನಂತರ ಬದಲಾವಣೆ ಗಳಾದಂತೆ, ಮತ್ತು ಹಾಳಾದ ಸಾಮಗ್ರಿಗಳನ್ನು,ಬದಲಾಯಿಸಿ,ಸ್ಥಳೀಯರಾದ ಸಂದೀಪ ಗಾವಡಾ ಉತ್ತಮ ಸಂಘಟನೆ ಮಾಡಿ ಕೊಂಡು ವಾದ್ಯ ಮೇಳ ವನ್ನು ಮುನ್ನಡೆಸಿ ಕೊಂಡು ಹೋಗುತ್ತಿದ್ದಾರೆ. ಹಾಗಾಗಿ ಬಿಡುವಿಲ್ಲದೇ ಕಾರ್ಯಕ್ರಮ ನೀಡುತ್ತಿದ್ದಾರೆ. ಇದು ಸಂಘದ ಸದಸ್ಯರಿಗೂ ಸಂತಸ ತಂದಿದೆ. ಇದು ತಾಲೂಕಿನ ಹೆಮ್ಮೆಯ ವಿಷಯ ವಾಗಿದೆ.

Banner Ad