ಸುದ್ದಿ ಕನ್ನಡ ವಾರ್ತೆ
ಶಿರಸಿ: ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ವಿಶೇಷ ಆಸಕ್ತಿಯಿಂದ ಸೆ. ೨೧ರಿಂದ ೨೩ ರಂದು ಬೆಂಗಳೂರಿನಲ್ಲಿ ಕರೆದಿರುವ ವಿಶೇಷ ಅಧಿವೇಶನದಲ್ಲಿ ಜಿಲ್ಲೆಯ ರೈತರ ಪರ
೫ ಅಂಶದ ಮಾರ್ಗಸೂಚಿಗೆ ಧ್ವನಿಯಾಗಲು ಜಿಲ್ಲೆಯ ಶಾಸಕರಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಕೋರಿದ್ದಾರೆ.
ಅವರು ಶನಿವಾರ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ವೇದಿಕೆಯ ಕಾರ್ಯಕಾರಿ ಸಮಿತಿಯಲ್ಲಿ ಮಾರ್ಗಸೂಚಿ ಪಟ್ಟಿಯನ್ನ ಬಿಡುಗಡೆಗೊಳಿಸಿ ಮಾತನಾಡಿದರು.
ಜಿಲ್ಲೆಯ ೬೪ ಸಾವಿರ ಹೇಕ್ಟರ್ ಅರಣ್ಯ ಭೂಮಿಯನ್ನ ರಾಷ್ಟ್ರೀಯ ಯೋಜನೆಗಳಿಗೆ ನೀಡುವ ಸರ್ಕಾರ ೮೦ ಸಾವಿರ ಕುಟುಂಬವು ಜೀವನ ಮತ್ತು ವಾಸ್ತವ್ಯಕ್ಕಾಗಿ ಅತಿಕ್ರಮಿಸಿರುವ ಸುಮಾರು ೧೮ ಸಾವಿರ ಹೇಕ್ಟರ್ ಅರಣ್ಯ ಭೂಮಿಯನ್ನು ಸಾಗುವಳಿ ಭೂಮಿ ನೀಡಬೇಕು. ಜಿಲ್ಲೆಯಲ್ಲಿ ೧೯೭೮ ರ ಪೂರ್ವ ಅರಣ್ಯ ಭೂಮಿ ಸಾಗುವಳಿದಾರರಿಗೆ ೧೯೭೬ ರಲ್ಲಿ ಕೇಂದ್ರ ಸರ್ಕಾರವು ಮಂಜೂರಿಗೆ ಅನುಮೋದನೆ ನೀಡಿದರೂ , ಅರಣ್ಯಕ್ಕೆ ಬದಲಿ ಕಂದಾಯ ಭೂಮಿ ಅರಣ್ಯಕ್ಕೆ ವರ್ಗಾಯಿಸದೇ ಇರುವುದು ಹಾಗೂ ಜಿಲ್ಲೆಯಲ್ಲಿ ಸಾವಿರಕ್ಕೂ ಮಿಕ್ಕಿ ಅರಣ್ಯ ಭೂಮಿ ಹಂಗಾಮಿ ಭೂಮಿ ಖಾಯಂ ಲಾಗಣಿ ಮಾಡದೇ ಇರುವ ಕುರಿತು, ಪಂಚಾಯತ್ ರಾಜ್ ಇಲಾಖೆಯಲ್ಲಿ ಅನಧೀಕೃತ ಕಟ್ಟಡಗಳಿಗೆ ತೆರಿಗೆ ರದ್ದು ಪಡಿಸುವ ಕುರಿತು ಗಂಭೀರವಾಗಿ ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸಬೇಕು ಎಂದಿದ್ದಾರೆ.
ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಕಾನೂನುಬಾಹಿರ ಮತ್ತು ಕಾನೂನಿಗೆ ವ್ಯತಿರಿಕ್ತವಾಗಿ ತಿರಸ್ಕರಿಸುವ ಕುರಿತು ಚರ್ಚಿಸಿ ಸಾಂದರ್ಭಿಕ ದಾಖಲೆ ಆಧಾರದ ಮೇಲೆ ಕೇಂದ್ರ ಸರ್ಕಾರ ನೀಡಿದ ಸುತ್ತೂಲೆ ಹಾಗೂ ಕಾಯಿದೆಯಲ್ಲಿ ನಿರ್ಧಿಷ್ಟ ದಾಖಲೆಗಳನ್ನ ಒತ್ತಾಯಿಸತಕ್ಕದ್ದಲ್ಲ ಎಂಬ ತಿದ್ದುಪಡಿ ಅಂಶದ ಮೇಲೆ ಅರಣ್ಯವಾಸಿಗಳ ಪರ ನಿರ್ಣಯ ತೆಗೆದುಕೊಳ್ಳಬೇಕು. ಸಂಸತ್ತಿನಲ್ಲಿ ಕಳೆದ ಫೆಬ್ರವರಿ ೨೮ ರಂದು ಉತ್ತರಕನ್ನಡ ಜಿಲ್ಲೆಯಲ್ಲಿ ೭೪೨೩೪ ಅರ್ಜಿಗಳು ತಿರಸ್ಕರಿಸಲ್ಟಟ್ಟಿದೆ ಎಂದು ವರದಿ ಸಲ್ಲಿಸಿರುವುದರಿಂದ ತಿರಸ್ಕಾರವಾದ ಅರ್ಜಿಗಳನ್ನ ಪುನರ್ ಪರಿಶೀಲಿಸಲು ತೆಗೆದುಕೊಳ್ಳುವ ಕ್ರಮದ ಕುರಿತು ನಿರ್ಣಯಿಸಬೇಕು.
ಕೇಂದ್ರ ಸರ್ಕಾರವು ೭ ನೇ ಅಧಿಸೂಚನೆ ಪ್ರಕಟಿಸಿರುವ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆ ೫೬೭ ,
೯ ತಾಲೂಕಿನಿಂದ ೧೩೨ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗುರುತಿಸಿರುವುದರಿಂದ ಉಂಟಾಗುವ ಜನ ಜೀವನ ಪ್ರದೇಶ ಮತ್ತು ಅರಣ್ಯವಾಸಿಗಳ ಜೀವನ ವ್ಯವಸ್ಥೆ ಮೇಲೆ ಆಗುವ ಪರಿಣಾಮಗಳನ್ನ ಸರ್ಕಾರದ ಗಮನಕ್ಕೆ ತರುವುದು. ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯನ್ನು ಉನ್ನತ ಮಟ್ಟದ ಸಮಿತಿಯನ್ನ ರಚಿಸಿ ಬೌಗೋಳಿಕ ಸಮಿಕ್ಷೇ (ಸರ್ವೆ) ಮೂಲಕ ಗ್ರಾಮ ಸಭೆಯಲ್ಲಿ ನಿರ್ಣಯಿಸುವುದನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸುವುದು ಮುಖ್ಯವಾಗಿದೆ ಎಂದಿದ್ದಾರೆ.
ಈ ಮಾರ್ಗ ಸೂಚಿ ಸಂಬಂಧಿಸಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ನಿಯೋಗವು ಜಿಲ್ಲೆಯ ಜನ ಪ್ರತಿನಿಧಿಗಳೊಂದಿಗೆ ಮುಕ್ತವಾಗಿ ಚರ್ಚಿಸಿ ನೆರವಾಗಲು ಇದೇ ವೇಳೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಸಂಚಾಲಕ ಇಬ್ರಾಹಿಂ ಸಾಬ ಗೌಡಳ್ಳಿ, ನೆಹರು ನಾಯ್ಕ ಬಿಳೂರು, ರಫೀಕ್ ಗೌಡಳ್ಳಿ, ಚಂದ್ರಣ್ಣ ಮರಗುಂಡಿ , ಕೃಷ್ಣ ಮರಾಠಿ ಸವಲೆ, ಪರಮೇಶ್ವರ ದೇಶಭಂಡಾರಿ ವಾನಳ್ಳಿ, ರಾಜು ಪೂಜಾರಿ, ನಾರಾಯಣ ನಾಯ್ಕ ನೆಗ್ಗು, ಕೃಷ್ಣ ಮಾದೇವ ನಾಯ್ಕ ಬಂಡಲ, ಸ್ವಾತಿ ಜೈನ್ , ಯಶೋದಾ ನೌಟೂರು, ಈಶ್ವರ ನಾಯ್ಕ ಬಂಕನಾಳ , ಮಂಜು ಲಕ್ಷ್ಮಣ ನಾಯ್ಕ , ನಾರಾಯಣ ಉಮ್ಮುಡಿ, ಪಂಪಾವತಿ ಮುಂತಾದವರು ಉಪಸ್ಥಿತರಿದ್ದರು.
