ಸುದ್ದಿ ಕನ್ನಡ ವಾರ್ತೆ

ಜೊಯಿಡಾ; ತಾಲೂಕಿನ ಪ್ರತಿಷ್ಠಿತ ನಂದಿಗದ್ದಾ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆ ದಿನಾಂಕ 22ರಂದು ನಡೆಯಲಿದೆ.

31.3.26 ಕ್ಕೆ ಮುಗಿದ ವಾರ್ಷಿಕ ವರದಿ ವರ್ಷದ ಸಂಘದ ಆಡಳಿತ ವ್ಯವಹಾರದ ಸಭೆ ಯರಮುಖದ ಶ್ರೀ ಸೋಮೇಶ್ವರ ಸಭಾ ಭವನದಲ್ಲಿ ನಡೆಯಲಿದ್ದು ಸಂಘದ ಅಧ್ಯಕ್ಷ ರಾಮಕೃಷ್ಣ ವಿ. ದಾನಗೇರಿ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ತಾಲೂಕಿನಲ್ಲಿಯೇನಂದಿಗದ್ದಾ ಸೇವಾ ಸಹಕಾರಿ ಸಂಘದ ವ್ಯವಹಾರ ಉತ್ತಮ ಗುಣಮಟ್ಟದಿಂದ ಕೂಡಿದ್ದು ಈ ವರ್ಷ 21 ಲಕ್ಷ 70 ಸಾವಿರ ದಷ್ಟು ಲಾಭ ಗಳಿಸಿದೆ. ವರದಿ ವರ್ಷ ದಲ್ಲಿ ಸಂಘದ ಸದಸ್ಯರ ಸಾಲ ವಸೂಲಾತಿ 99.24 ರಷ್ಟು ಆಗಿದೆ.ಸಂಘದ ಸದಸ್ಯರ ಸಂಕಷ್ಟಕ್ಕೆ ಸಂಘ ಸದಾ ಸ್ಪಂದಿಸುತ್ತಿದ್ದು, ಇದು ಸಾಲ ವಸೂಲಾತಿ ಉತ್ತಮ ವಾಗಲು ಕಾರಣವಾಗಿದೆ. ಸದಸ್ಯರ ಷೇರು ಬಂಡವಾಳ ರೂ 79ಲಕ್ಷ 41 ಸಾವಿರ ಇದ್ದರೆ. ಠೇವುಗಳುರೂ 9 ಕೋಟಿ 70 ಲಕ್ಷ ಕ್ಕಿಂತ ಹೆಚ್ಚಾಗಿದ್ದು ಈ ವರ್ಷ ರೂ1 ಕೋಟಿ 37 ಲಕ್ಷಕ್ಕೂ ಹೆಚ್ಚು ಠೇವು ಹಣ ಜಮಾ ಆಗಿದೆ.
ಈ ವರ್ಷ ಬ್ಯಾಂಕ್ ಸಾಲವು ಮುದ್ದತ್ತು ಮೀರಿದ್ದು ಇರುವುದಿಲ್ಲ. ಸಂಘದ ಗುಂತಾವಣೆ ರೂ.5 ಕೋಟಿ 84 ಲಕ್ಷಕ್ಕಿಂತ ಹೆಚ್ಚಿರುತ್ತದೆ. ಸಂಘದ ಪತ್ತು ಮತ್ತು ಮಾರಾಟ ಯೋಜನೆ ಉತ್ತಮವಾಗಿದ್ದು 9 ಕೋಟಿ 35 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಅಡಿಕೆ ಕಾಳುಮೆಣಸು ಸಂಘದ ಮೂಲಕ ವಿಕ್ರಿ ಮಾಡಲಾಗಿದೆ. ಇದರಿಂದ ಸಂಘಕ್ಕೆ ರೂ.4 ಲಕ್ಷ 71 ಸಾವಿರ ದಷ್ಟು ದಲಾಲಿ ರಿಬೆಟ್ ದೊರೆತಿದೆ. ಇತರ ವ್ಯವಹಾರ ದಲ್ಲಿ ಸಹಕಾರಿ ಸಂಘವು ತನ್ನ ಕಾರ್ಯ ಕ್ಷೇತ್ರದ ಜನರ ಕಾರ್ಯಕ್ರಮಗಳಿಗೆ ಪಾತ್ರೆಗಳನ್ನು ಇತರ ಸಲಕರಣೆಗಳನ್ನು ನೀಡುವ ಮೂಲಕ ಸಹಕಾರ ನೀಡುತ್ತಿದೆ. ಕಳೆದ ಎರಡು ವರ್ಷಗಳಿಂದ ಜನರ ಅಗತ್ಯತೆಗೆ ಸೂಪರ್ ಮಾರ್ಟ್ ನಿರ್ಮಿಸಿ, ಸಾಮಗ್ರಿಗಳನ್ನು ಒದಗಿಸುವ ಮೂಲಕ ವ್ಯವಹಾರ ವೃದ್ಧಿ ಪಡಿಸಿದೆ.ಸಂಘದ ಸದಸ್ಯರ ಕುಟುಂಬ ಗಳಿಗೆ ವಿವಿಧ ಸಹಕಾರ ನೀಡುವ ಮೂಲಕ ಸಹಕಾರ ದ ನಿಜವಾದ ದ್ಯೇಯೋದ್ದೇಶ ಈಡೇರಿಸುವತ್ತ ಸಾಗುತ್ತಿದೆ.