ಸುದ್ದಿ ಕನ್ನಡ ವಾರ್ತೆ
ಶಿರಸಿ:ನಗರದ ಜನಪ್ರಿಯ ‘ಸತ್ಕಾರ’ ಹೋಟೆಲ್ ಮಾಲೀಕರಾದ ಶ್ರೀ ವಾಸುದೇವ (ಕಿರಣ್) ನಾಯಕ ಅವರ ಅಕಾಲಿಕ ನಿಧನದ ವಾರ್ತೆ ಕೇಳಿ ತೀವ್ರ ಆಘಾತವಾಯಿತು.
ತಮ್ಮ ಕಠಿಣ ಪರಿಶ್ರಮ ಹಾಗೂ ಆತ್ಮೀಯ ಅತಿಥಿ ಸತ್ಕಾರದ ಮೂಲಕ ‘ಸತ್ಕಾರ’ ಹೋಟೆಲ್ ಅನ್ನು ಕೇವಲ ಒಂದು ಉದ್ಯಮವಾಗಿ ಮಾತ್ರವಲ್ಲದೆ, ಉತ್ತರ ಕನ್ನಡದ ಒಂದು ಸ್ವಾದಿಷ್ಟ ಪರಂಪರೆಯಾಗಿ ಬೆಳೆಸಿದವರು ಅವರು. ಅವರ ಸಜ್ಜನಿಕೆ ಮತ್ತು ವೃತ್ತಿಪರತೆ ಎಲ್ಲರಿಗೂ ಮಾದರಿಯಾಗಿತ್ತು.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಹಾಗೂ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಮತ್ತು ಹಿತೈಷಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ವ್ಯಕ್ತಪಡಿಸಿರುತ್ತಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ
ಸಂಸದರು, ಉತ್ತರ ಕನ್ನಡ.
