Banner Ad

ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ :ಪಶ್ಚಿಮ ಬಂಗಾಳ,ಅಸ್ಸಾಂ ಪುದಚೇರಿಗಳಲ್ಲಿ ಬಿಜೆಪಿ ಯ ದಿಗ್ವಿಜಯ ಹಿನ್ನಲೆಯಲ್ಲಿ ಬಿಜೆಪಿ ಮಂಡಲದ ವತಿಯಿಂದ ಬಸವೇಶ್ವರ ಸರ್ಕಲ ನಲ್ಲಿ ವಿಜಯೋತ್ಸವ ಆಚರಿಸಲಾಯಿತು.

Banner Ad

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಕಾರವಾರ ಉಪಸ್ಥಿತರಿದ್ದು ಮೋದೀಜಿಯವರ ಆಡಳಿತವನ್ನು ಅರ್ಥೈಸಿಕೊಂಡ ಜನ ಬಿಜೆಪಿಯನ್ಬು ಬೆಂಬಲಿಸಿದ್ದಾರೆ.ದೇಶದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಲಿದೆ.ಈ ಫಲಿತಾಂಶ ನಮಗೆಲ್ಲ ಸಂತಸ ತಂದಿದೆ.ಜನ ಕುತಂತ್ರಕ್ಕೆ ಮಾರು ಹೋಗದೆ ದೇಶದ ಸುಭದ್ರ ಆಡಳಿತಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದರು.ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ,ಮಂಡಲಾಧ್ಯಕ್ಷ ಪ್ರಸಾದ ಹೆಗಡೆ,ಜಿಲ್ಲಾ ಸಮಿತಿಯ ವಿಶೇಷ ಆಹ್ವಾನಿತ ಉಮೇಶ ಭಾಗ್ವತ,ಪ್ರಮುಖರಾದ ರಾಘವ ಭಟ್ಟ ಹಾಸಣಗಿ,ಚಂದ್ರಕಲಾ ಭಟ್ಟ,ಶೃತಿ ಹೆಗಡೆ,ರಜತ್ ಬದ್ದಿ,ಕೆ.ಟಿ.ಹೆಗಡೆ ಚಿಕ್ಕೊರಗಿ,ಮುಂತಾದವರು ಪಾಲ್ಗೊಂಡಿದ್ದರು.

Banner Ad