Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ ತಾಲೂಕಿನಲ್ಲಿ ನಡೆಯುತ್ತಿದ್ದ ರಾಫ್ಟಿಂಗ್ ಈಗ ಪ್ರವಾಸೋಧ್ಯಮ ಇಲಾಖೆಯ ನಿರ್ಲಕ್ಷದಿಂದ ಮಾರಾ ಮಾರಿ ವರೆಗೂ ನಡೆದಿದೆ.

Banner Ad

ತಾಲೂಕಿನ ರಾಫ್ಟಿಂಗ್ ದೇಶ ವಿದೇಶಿಗರನ್ನು ಆಕರ್ಷಿಸುತ್ತಿದೆ. ಕಳೆದ ಹಲವಾರು ವರ್ಷಗಳಿಂದ ರಾಫ್ಟಿಂಗ್ ನಡೆಯುತ್ತಿದ್ದರೂ ಮುಸುಕಿನ ಗುದ್ದಾಟ ನಡೆದೇ ಇತ್ತು. ಇದನ್ನೆಲ್ಲಾ ಸರಿಪಡಿಸಬೇಕಾಗಿದ್ದ ಪ್ರವಾಸೋಧ್ಯಮ ಇಲಾಖೆ ಮತ್ತು ತಾಲೂಕಾ ಆಡಳಿತದ ನಿಷ್ಕಾಳಜಿಯಿಂದ ದರ ನಿಗದಿ ನೆವ ಮತ್ತು ಗುಂಪುಗಾರಿಕೆಯಿಂದ ಗಣೇಶ ಗುಡಿಯಲ್ಲಿ ಮಾರಾ ಮಾರಿ ನಡೆದಿದೆ. ಹೊಸ ದರ ನಿಗದಿಗೆ ರಾಫ್ಟಿಂಗ್ ನಡೆಸುವ ಏಜೆಂಟರು ಜೊಯಿಡಾ ತಹಶೀಲ್ದಾರರಿಗೆ ಮನವಿ ನೀಡಿದ್ದರುನಂತರ ರಾಫ್ಟಿಂಗ್ ಕೌಂಟರ್ ಇರುವಲ್ಲಿ ಹೋದಾಗ ಎರಡೂ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಮಾರಾ ಮಾರಿ ನಡೆದಿದೆ. ಈ ಬಗ್ಗೆ ಸಿಪಿಐ ಚಂದ್ರಶೇಖರ್ ಹರಿಹರ ಅವರಲ್ಲಿ ಹೊಡೆತ ತಿಂದವರು ದೂರಿದ್ದಾರೆ. ಗಾಯಗಳನ್ನು ತೋರಿಸಿ ದೂರು ನೀಡುವುದಾಗಿ ತಿಳಿಸಿದ್ದಾರೆ. ಏನೇ ಆದರೂ ಗುಂಪುಗಾರಿಕೆಗೆ ಕಾರಣವಾದ ಪ್ರವಾಸೋಧ್ಯಮ ಇಲಾಖೆ ಮಾತು ಕತೆ ಮಾಡಿ ಸರಿಪಡಿಸಬೇಕು .ಇಲ್ಲ ವೆಂದಾದರೆ, ಇದೇ ರೀತಿಯ ಕಲಹ ಗಳು ನಡೆದು ತಾಲೂಕಿನ ಪ್ರವಾಸೋದ್ಯಮಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆಗಳನ್ನು ಅಲ್ಲ ಗಳೆಯಲಾಗದು, ಇಂದಿನ ಘಟನೆಗೆ ಎರಡು ಕಡೆಯಿಂದ ದೂರುಗಳನ್ನು ನೀಡುವ ಸಾಧ್ಯತೆಗಳಿವೆ.ಈ ಹಿಂದೆ ಕೂಡ ರಾಪ್ಟಿಂಗ್ ವಿಷಯ ದಲ್ಲಿ ಗಲಾಟೆಗಳು ದೂರುಗಳು ನಡೆದಿವೆ.

Banner Ad