Banner Ad

ಸುದ್ದಿ ಕನ್ನಡ ವಾರ್ತೆ

ಮುಂಡಗೋಡ ತಾಲೂಕಿನ ಬಾಚಣಕಿಯ ರೈತ ಕುಟುಂಬ ಅಂದಾನೆಪ್ಪ ದೊಡ್ಡಮನಿ ಶೈಲಾ ದಂಪತಿ ಪುತ್ರ ಬಸವರಾಜ ಈಗ ಕೃಷಿ ವಿಜ್ಞಾನಿ. ಗ್ರಾಮೀಣ ಭಾಗದ ಯುವಕ ಕಡುಬಡತನದಲ್ಲಿಯೂ ಕಷ್ಟಪಟ್ಟು ಛಲದಿಂದ ಓದಿ ಉನ್ನತ ಶಿಕ್ಷಣ ಹೊಂದುವ ಮೂಲಕ ತಾಲೂಕಿನ ಮೊಟ್ಟಮೊದಲ ಕೃಷಿ ವಿಜ್ಞಾನಿಯಾಗುತ್ತಿದ್ದಾರೆ.

Banner Ad

ಬಿಎಸ್‌ಸಿ ಅಗ್ರಿ ಪದವಿಯನ್ನು ಹಾವೇರಿ ಜಿಲ್ಲೆಯ ಹನುಮನಮಟ್ಟಿ ಕೃಷಿ ಮಹಾ ವಿದ್ಯಾಲಯದಲ್ಲಿ, ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಎಮ್.ಎಸ್.ಸಿ. ಅಗ್ರಿ ಮತ್ತು ಪಿಎಚ್‌ಡಿ ಪದವಿ ಪಡೆದರು. ಎಮ್.ಎಸ್.ಸಿ. ಓದುತ್ತಿದ್ದಾಗ ಆಯ್‌ಸಿಆರ್ ಪರೀಕ್ಷೆಯಲ್ಲಿ ೧೫ನೇ ರ‍್ಯಾಂಕ್ ಪಡೆದರು.

ಪಿಎಚ್‌ಡಿಯೊಂದಿಗೆ ಎಸ್‌ಆರ್‌ಎಫ್ ಪರೀಕ್ಷೆಯಲ್ಲಿ ೭ನೇ ರ‍್ಯಾಂಕ್ ಪಡೆದು ಮಿನಿಸ್ಟರಿ ಆಫ್ ಎನ್ವಿರಾನ್ಮೆಂಟಲ್ ಫಾರೆಸ್ಟರಿ ಅಂಡ್ ಕ್ಲೈಮೇಟ್ ಚೇಂಜ್ ಇದರ ಅಡಿಯಲ್ಲಿ ಬರುವ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟರಿ ರಿಸರ್ಚ್ ಅಂಡ್ ಎಜುಕೇಶನ್ ಅಟೋನೋಮಸ್ ಬಾಡಿಯಲ್ಲಿ ವಿಜ್ಞಾನಿಯಾಗಿ ಸೇರ್ಪಡೆಗೊಳ್ಳಲಿದ್ದಾರೆ.

೧೦ ಜನ ಅಭ್ಯರ್ಥಿಗಳಲ್ಲಿ ಕೇವಲ ಇಬ್ಬರು ಆಯ್ಕೆಯಾಗಿದ್ದಾರೆ.ಇದು ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ವಿಷಯ ವಾಗಿದೆ

Banner Ad