Banner Ad

ಸುದ್ದಿ ಕನ್ನಡ ವಾರ್ತೆ

ಬೈಲಹೊಂಗಲ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನೇಸರಗಿ ಹೋಬಳಿಯ ಕಿತ್ತೂರ ವಿಧಾನ ಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ನೇಸರಗಿ ಗ್ರಾಮದ ಗಣ್ಯ ಮನೆತನದ ಹಿರಿಯ ಪತ್ರಕರ್ತ, ಅಂಕಣಕಾರ, ಕನ್ನಡ ಕಟ್ಟಾಳು ಚನ್ನಮಲ್ಲಪ್ಪ ಯಲ್ಲಪ್ಪ ಮೆಣಸಿನಕಾಯಿ ಅವರಿಗೆ ಬೆಂಗಳೂರಿನ ಎಸ್.ಎಸ್.ಕಲಾ ಸಂಗಮ ಟ್ರಸ್ಟ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ನೀಡಿ ಗೌರವಿದ ಪ್ರಯುಕ್ತ ಬೆಂಗಳೂರಿನ ಕೇಂದ್ರ ಬಸವ ಸಮಿತಿಯಿಂದ ನೇಸರಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲ್ಲೂಕಿನ ಅಧ್ಯಕ್ಷರು, ಬಸವ ಪಥ ಸದಸ್ಯರಾದ ಎನ್.ಆರ್.ಠಕ್ಕಾಯಿ ಅವರು ಸನ್ಮಾನಿಸಿ, ಅಭಿನಂದಿಸಿ ಗೌರವಿಸಿದರು.

Banner Ad

ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರು, ಕೇಂದ್ರ ಬಸವ ಸಮಿತಿಯ ಹಿರಿಯ ನಿರ್ದೇಶಕರಾದ ಮೋಹನ ಬಸನಗೌಡ ಪಾಟೀಲ ಅವರು ಮಾತನಾಡಿ ಮಕ್ಕಳ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲ್ಲೂಕಿನ ಅಧ್ಯಕ್ಷರಾದ ಚನ್ನಮಲ್ಲಪ್ಪ ಯಲ್ಲಪ್ಪ ಮೆಣಸಿನಕಾಯಿ ಅವರು ವಿಚಾರವಾಣಿ, ಕರುಣೆಯ ತೋಟ, ಅಗ್ನಿ ಪರೀಕ್ಷೆ, ಕಾಲಚಕ್ರ, ಬಾಳು ಬಂಗಾರ ಮತ್ತಿತರ ಕಥೆಗಳು, ಮೇರು ಸಾಧಕರು ಮತ್ತು ಐತಿಹಾಸಿಕ ಸ್ಥಳಗಳು, ಅಂಗಳದ ಗುಲಾಬಿ, ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ, ಮನದ ಮಾತು, ಭೋಜರಾಜನ ಪುನರ್ಜನ್ಮ ಇನ್ನಿತರ ಕಥೆಗಳು, ನಾ ಹೋದರೆ ನಿನಗೆ ಸುಖ, ಸಾಹಿತ್ಯ ಸಂಪದ ಸೇರಿದಂತೆ 14 ಕೃತಿಗಳನ್ನು ರಚಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಬೆಳಗಾವಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನಬಿಸಾಬ ಇಮಾಮಹುಸೇನ ಖುದ್ದುನವರ ಇವರು ಮಾತನಾಡಿ ಮೆಣಸಿನಕಾಯಿ ಅವರು ರಚಿಸಿದ ಬೋಜರಾಜನ ಪುನರ್ಜನ್ಮ ಪುಸ್ತಕಕ್ಕೆ ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾಂತಾದೇವಿ ಬಣಕಾರ ದತ್ತಿ ಪ್ರಶಸ್ತಿ, ಮಂಡ್ಯದ ಕರುನಾಡ ಸೇವಾ ಟ್ರಸ್ಟದಿಂದ ರಾಜ್ಯಮಟ್ಟದ ಪ್ರಜಾಭೂಷಣ ಪ್ರಶಸ್ತಿ , ಬ್ಯಾಕೂಡ ಲಕ್ಕಮ್ಮದೇವಿ ಕಲಾ ಪೋಷಕ ಸಂಘ(ರಿ) ದಿಂದ ಕೌಜಲಗಿ ನಿಂಗಮ್ಮ ಪ್ರಶಸ್ತಿ, ಚಿತ್ರದುರ್ಗದ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡದ ರಾಜ್ಯಮಟ್ಟದ ನಾಡ ಪ್ರಭು ಕೆಂಪೇಗೌಡ ಸೇವಾ ರತ್ನ ಪ್ರಶಸ್ತಿ, ಸುಜ್ಞಾನ ಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಾಧಕರ ಮಾತಾ ಪ್ರಕಾಶನ ವತಿಯಿಂದ ಸೇವಾ ರತ್ನ ಪ್ರಶಸ್ತಿ, ನೇಸರಗಿಯಲ್ಲಿ ನಡೆದ ಬೈಲಹೊಂಗಲ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉತ್ತಮ ಪತ್ರಕರ್ತ ಪ್ರಶಸ್ತಿ, ಹೊಸರಿತ್ತಿಯ ಸುಭುದೇಂದ್ರ ತೀರ್ಥ ವಿದ್ಯಾಸಂಸ್ಥೆಯಿಂದ ಸುಭದೇಂದ್ರ ತೀರ್ಥ ಶ್ರೇಷ್ಠ ಪತ್ರಿಕೋದ್ಯಮಿ ರಾಜ್ಯ ಪ್ರಶಸ್ತಿ , ಮೈಸೂರು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿಶ್ವ ಮಾನವ ಕುವೆಂಪು ಪ್ರಶಸ್ತಿ 2022, ಗುರು ಪುಟ್ಟರಾಜ ಸದ್ಭಾವನಾ ರಾಜ್ಯಮಟ್ಟದ ಪ್ರಶಸ್ತಿ ಸೇರಿದಂತೆ 30 ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ ಎಂದರು.

ನೇಸರಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಚಾರ್ಯರಾದ ಪ್ರೊ. ವಿನಾಯಕ ಹೊನ್ನಪ್ಪನವರ ಮಾತನಾಡಿ ಚನ್ನಮಲ್ಲಪ್ಪ ಅವರು ಎಲೆ ಮರೆಯ ಕಾಯಿಯಂತಿರುವ 100 ಕ್ಕೂ ಹೆಚ್ಚಿನ ರಂಗಕರ್ಮಿಗಳ ಪರಿಚಯ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ಎಂದರು.
ಕನ್ನಡ ಪ್ರಾಧ್ಯಾಪಕರಾದ ಪ್ರೊ.ಸುಖದೇವಾನಂದ ಚವತ್ರಿಮಠ ಅವರು ಮಾತನಾಡಿ ಮೆಣಸಿನಕಾಯಿ ಅವರ 1500 ಕ್ಕೂ ಹೆಚ್ಚು ಲೇಖನಗಳು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು ಹೆಮ್ಮೆಯ ವಿಷಯ ಎಂದರು.
ಪ್ರೊ. ಮಹಾಂತೇಶ ಅವ್ವಕ್ಕನವರ ಸ್ವಾಗತಿಸಿದರು. ಅಶೋಕ ಬಾಗಿ ವಂದಿಸಿದರು.

Banner Ad