ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ಕುಂಬಾರ ವಾಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಡೇರಿಯಾ ಗ್ರಾಮದಲ್ಲಿ ನವರಾತ್ರಿಯ ಹಬ್ಬದ ಪ್ರಯುಕ್ತ ಭಕ್ತಿ ವಿಜಯ ಅರ್ಥಾತ್ ನರಸಿಂಹ ಅವತಾರ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.
ನಾಟಕ ಪ್ರದರ್ಶನದ ಆರಂಭದಲ್ಲಿ ನವರಾತ್ರಿಯ ಹಬ್ಬದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು,ಸುಮಾರು ನೂರಾರು ಊರಿನ ಹಾಗೂ ಪರ ಊರಿನ ಗ್ರಾಮಸ್ಥರಿಗೆ ಅನ್ನಪ್ರಸಾದ ನೀಡಲಾಯಿತು.ನಂತರ ಊರಿನ ಹಾಗೂ ಪರ ಊರಿನ ಭಕ್ತ ವೃಂದದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ನವಮಿ ಹಬ್ಬದ ನಿಮಿತ್ತ ಸಾಂಪ್ರದಾಯಿಕ ವೇಷಭೂಷಣ,ದೇವರ ಹಾಡು,ವಾದ್ಯಗಳೊಂದಿಗೆ ಸೋಂಗಾ ನೃತ್ಯ ಸ್ಥಳೀಯ ಭಕ್ತರು ನಡೆಸಿಕೊಟ್ಟರು. ಗ್ರಾಮದ ಭಕ್ತ ವೃಂದದವರಿಂದ ಅಹಂಕಾರದ ವಿರುದ್ಧ ಭಕ್ತಿಯ ವಿಜಯ,ಅಧರ್ಮದ ವಿರುದ್ಧ ಧರ್ಮದ ವಿಜಯ,ಭಕ್ತ ಪ್ರಹ್ಲಾದನ ಅಚಲ ಶೃದ್ಧೆ, ಹಿರಣ್ಯಕಶ್ಯುಪಿನ ಪ್ರಚಂಡ ಅಹಂಕಾರದ ಅಂತ್ಯ ಹಾಗೂ ಭಗವಾನ್ ಶ್ರೀ ವಿಷ್ಣುವಿನ ನರಸಿಂಹ ಅವತಾರದ ದಿವ್ಯ ದರ್ಶನದ “ಭಕ್ತಿ ವಿಜಯ” ಅರ್ಥಾತ ನರಸಿಂಹ ಅವತಾರ ಎಂಬ ಪೌರಾಣಿಕ ನಾಟಕದ ಪ್ರದರ್ಶನ ನಡೆಯಿತು.
ನಾಟಕ ದ ಆರಂಭದಲ್ಲಿ ವಿಘ್ನವಿನಾಶಕನ ಪ್ರಾರ್ಥನೆ ನಡೆಯಿತು. ಪೌರಾಣಿಕ ನಾಟಕದ ಬಾಲ ಕಲಾವಿದರಾಗಿ ಮಂದೀಪ್ ಡೇರೆಕರ,ಮೋಹಿತ್ ಡೇರೆಕರ, ಅಧಿರಾ ಡೇರೆಕರ,ನೈತಿಕ್ ಡೇರೆಕರ,ಸ್ನೇಹಾ ಡೇರೆಕರ, ವೇದಿಕಾ ಡೇರೆಕರ,ಸುಶಾಂತ ಡೇರೆಕರ,ರೋಹನ್ ಡೇರೆಕರ,ಹರ್ಷ ಡೇರೆಕರ ಉತ್ತಮ ಅಭಿನಯ,ನೃತ್ಯದ ಮೂಲಕ ನೆರೆದಿದ್ದ ಪ್ರೇಕ್ಷಕರ ಮನಸೆಳೆದರು. ಮುಂದಿನ ಪೀಳಿಗೆಗೆ ನಮ್ಮ ಸಾಂಪ್ರದಾಯಿಕ,ಸಾಂಸ್ಕೃತಿಕ ಕಲೆಯನ್ನು ಬಾಲ್ಯದಲ್ಲಿಯೇ ಮಕ್ಕಳಲ್ಲಿ ಬೆಳೆಸುವ ದೃಷ್ಟಿಯಿಂದ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಯಿತು. ಇನ್ನುಳಿದ ಕಲಾವಿದರಾಗಿ ರಾಕೇಶ ಡೇರೆಕರ,ಮನೋಜ ಡೇರೆಕರ,ರವೀಂದ್ರ ಡೇರೆಕರ, ನಿವಾಸ ಡೇರೆಕರ, ಅಭಿಷೇಕ ಡೇರೆಕರ, ಅಕ್ಷಯ ಡೇರೆಕರ, ದೇವರಥ ಡೇರೆಕರ, ಆದೀಶ ಡೇರೆಕರ, ಶುಭಂ ಡೇರೆಕರ, ರೋಹಿತ ಡೇರೆಕರ, ನರೇಶ ಡೇರೆಕರ,ಆಶೀಶ ಡೇರೆಕರ, ಚಂದ್ರಶೇಖರ ಗಾವಡಾ ಅಮೋಘ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದರು. ಸಂಗೀತ ವಿಭಾಗದಲ್ಲಿ ತಬಲಾ ಅಖಿಲ್ ಡೇರೆಕರ, ಹಾರ್ಮೋನಿಯಂ ಈಶ್ವರ ಡೇರೆಕರ,ಗಾಯನ ಮೋಹನ ಡೇರೆಕರ,ದೀಪಕ, ನಿರ್ದೇಶನ,ತಾಳ ಸಾಥ್ ಗಣಶ್ಯಾಮ ಡೇರೆಕರ ಮತ್ತು ಜಯಾನಂದ ಡೇರೆಕರ ಸಹಕಾರ ನೀಡಿದರು. ಗ್ರಾಮದ ಹಾಗೂ ಪರ ಊರಿನ ನೂರಾರು ಸಂಖ್ಯೆಯ ಹಿರಿಯರು, ಪುರುಷರು, ಮಹಿಳೆಯರು, ಯುವಕರು,ಯುವತಿಯರು,ಮಕ್ಕಳು ಪ್ರೇಕ್ಷಕರು ಬೆಳಗಿನ ಜಾವದವರೆಗೆ ನಾಟಕ ಪ್ರದರ್ಶನವನ್ನು ವೀಕ್ಷಿಸಿದರು.ಪೌರಾಣಿಕ ನಾಟಕ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು.
