ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಜೋಯಿಡಾ, ಕುಂಬಾರವಾಡ, ಅಣಶಿ, ಉಳವಿ,ಗಾಂಗೋಡಾ, ನಂದಿಗದ್ದೆ,ಪ್ರಧಾನಿ,ನಾಗೋಡಾ, ಅವೇಡಾ, ಜಗಲ್ಬೇಟ್, ಸಿಂಗರಗಾವ್ ಈ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಾಳೆಯ ದಿನ ದಿನಾಂಕ 18 ರಂದು ಗುರುವಾರ ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ವಾಗಲಿದೆ. ವಿದ್ಯುತ್ ಲೈನ್ 110\33\11 ಕೆವಿ ಗಣೇಶಗುಡಿ ಸಬ್ ಸ್ಟೇಶನಿನಲ್ಲಿ ಹಾಗೂ ಜೋಯಿಡಾ 33\11 ರಲ್ಲಿ ತುರ್ತು ಕೆಲಸ ನಡೆಯಲಿದೆ ಎಂದು ದಾಂಡೇಲಿ ಹೆಸ್ಕಾಂ ಇಲಾಕೆಯ ಎಇಇ ದೀಪಕ ನಾಯಕ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ, ಕಾರಣ ಈ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಹಕರು ಸಹಕರಿಸಬೇಕಾಗಿ ವಿನಂತಿಸಿ ಕೊಳ್ಳಲಾಗಿದೆ ಕೆಲಸ ಮುಗಿದ ತಕ್ಷಣ ವಿದ್ಯುತ್ ಪೂರೈಕೆ ಮಾಡಲಾಗುವದು ಎಂದು ತಿಳಿಸಲಾಗಿದೆ.