ಸುದ್ದಿ ಕನ್ನಡ ವಾರ್ತೆ

ಜೋಯಿಡಾ 26 ಶನಿವಾರ ಇಂದು ಹಳಿಯಾಳದ ಕುಸ್ತಿ ಆಖಾಡದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕುಸ್ತಿ ಪಂದ್ಯಾವಳಿಯಲ್ಲಿ ಬಿ.ಜಿ.ವಿ.ಎಸ್ ಪ.ಪೂ ಕಾಲೇಜು ರಾಮನಗರದ ಕ್ರೀಡಾ ಪಟುಗಳಾದ ಸವಿತಾ ಆಂಥೋನ ಸಿದ್ಧಿ,ಬಾಲಕಿಯರ ಪ್ರೀ ಸ್ಟೈಲ್ ನಲ್ಲಿ -62kg ವಿಭಾಗದಲ್ಲಿ ಬಂಗಾರದ ಪದಕ. ಬಾಲಕರ ಫ್ರೀ ಸ್ಟೈಲ್ ವಿಭಾಗದಲ್ಲಿ ಮನೋಜ ಹನುಮಂತಪ್ಪ ಹೊಸಮನಿ -61 kg ವಿಭಾಗದಲ್ಲಿ ಬಂಗಾರದ ಪದಕ. ಅಮೃತ್ ಪಕೀರಪ್ಪ ದುರ್ಗಣ್ಣವರ -70 kg ವಿಭಾಗದಲ್ಲಿ ಬಂಗಾರದ ಪದಕ. ಅಯಾನ್ ಬಡೇಸಾಬ್ ಕಕ್ಕೇರಿ -79 kg ವಿಭಾಗದಲ್ಲಿ ಬಂಗಾರದ ಪದಕ ಹಾಗೂ ಗ್ರೀಕೋ ರೋಮನ್ ವಿಭಾಗದಲ್ಲಿ ಮಹಮ್ಮದ ಜುನೆದ ಸಲೀಂ ನದಾಪ -55kg ವಿಭಾಗದಲ್ಲಿ ಬಂಗಾರದ ಪದಕ ಪಡೆದು ಅಮೋಘ ಸಾಧನೆ ಮಾಡಿದ್ದಾರೆ.

ಇದರೊಂದಿಗೆ ಧಾರವಾಡದಲ್ಲಿ ನಡೆಯುವ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆ ಆಗಿದ್ದಾರೆ. ಈ ಮೂಲಕ ರಾಮನಗರದ ಬಿ ಜಿ ವಿ ಎಸ್ ಕಾಲೇಜಿಗೆ ಅಪಾರ ಕೀರ್ತಿತಂದಿದ್ದಾರೆ.ಇದೇ ಮೊದಲ ಬಾರಿಗೆ ಕುಸ್ತಿ ಯಲ್ಲಿ ಐದು ಬಂಗಾರದ ಪಧಕ ಕಾಲೇಜ್ ಗೆ ದೊರೆತಿದೆ.

ಇವರ ಸಾಧನೆಗೆ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿ ಅಧ್ಯಕ್ಷರು ಶ್ರೀಮತಿ ವನಿತಾ ಪ್ರಭಾಕರ ರಾಣೆ, ಉಲ್ಲಾಸ ನಾಯ್ಕ ಉಪಾಧ್ಯಕ್ಷರು, ಮಂಜುನಾಥ ಪವಾರ್ ಕಾರ್ಯದರ್ಶಿ, ಕಿಶೋರ ರಾಣೆ ಜಂಟಿ ಕಾರ್ಯದರ್ಶಿ. ಗಜೇಂದ್ರಗಾಂದ್ಲೇ ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು, ಕಾಲೇಜಿನ ಪ್ರಾಚಾರ್ಯರು ರಾಜೇಶ ಪಿ . ದೇಸಾಯಿ, ದೈಹಿಕ ಶಿಕ್ಷಣ ಉಪನ್ಯಾಸಕ ಸಂಜಯ ಜಿ. ಗೌಡ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿಗಳುವಿದ್ಯಾರ್ಥಿಗಳು ಶುಭವನ್ನು ಹಾರೈಸಿರುತ್ತಾರೆ.