ಸುದ್ದಿ ಕನ್ನಡ ವಾರ್ತೆ

ಬುಧವಾರ ಜೋಯಿಡಾ ಕೇಂದ್ರ ಸ್ಥಳದಲ್ಲಿಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ ಈ ಬಗ್ಗೆ ಸರ್ವರೂ ಬಂದು ಸ್ವಚ್ಛತಾ ಕಾರ್ಯ ದಲ್ಲಿ ಕೈ ಜೋಡಿಸಬೇಕೆಂದು ಜೋಯಿಡಾ ಗ್ರಾಮ ಪಂಚಾಯತ್ ತಿಳಿಸಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನೀಡಿರುವ ಪ್ರಕಟಣೆ ಇಲ್ಲಿದೆ.

ಜೋಯಿಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲ ಇಲಾಖಾ ಅಧಿಕಾರಿಗಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಯುವಕ ಯುವತಿ ಮಂಡಳಿಯವರಿಗೆ, ಸ್ವಸಹಾಯ ಸಂಘದ ಪ್ರತಿನಿಧಿಗಳಿಗೆ, ವ್ಯಾಪಾರಸ್ಥ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರಿಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯವರಿಗೆ ಮತ್ತು ಊರಿನ ಎಲ್ಲ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ದಿನಾಂಕ 30/09/2026 ರಂದು ಮುಂಜಾನೆ 7-30 ಕ್ಕೆ ಜೋಯಿಡಾ ಗ್ರಾಮದ ಬಸ್ ನಿಲ್ದಾಣದಿಂದ ಜೈ ಸಂತೋಷಿ ಮಾತಾ ದೇವಸ್ಥಾನದವರೆಗೆ “ಸ್ವಚ್ಛತಾ ಹಿ ಸೇವಾ” ಅಭಿಯಾನದಡಿ ಸ್ವಚ್ಛತೆ ಶ್ರಮದಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಎಲ್ಲರು ಸರಿಯಾದ ಸಮಯಕ್ಕೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ತಿಳಿಸಿದೆ. …. ತಾಲೂಕು ಪಂಚಾಯತ್ ಆಡಳಿತ ಕೂಡ ತಾಲೂಕಿನ ಎಲ್ಲ ಗ್ರಾಮ ಪಂಚಾಯತ್ ಗಳಿಗೆ ಸ್ವಚ್ಛತಾ ಕಾರ್ಯಕ್ರಮ ಸರಿಯಾಗಿ ನಡೆಸಿ ಕೊಂಡು ಹೋಗಲು ಈಗಾಗಲೇ ಮಾರ್ಗ ಸೂಚಿ ಗಳನ್ನು ಕಳಿಸಿ ಕೊಟ್ಟಿದ್ದು ಎಲ್ಲ ಗ್ರಾಮ ಪಂಚಾಯತ್ ಗಳೂ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ನಡೆಸುತ್ತಿವೆ.