ಸುದ್ದಿ ಕನ್ನಡ ವಾರ್ತೆ

ಸಿದ್ದಾಪುರ:ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಹೊಲಿಗೆ ಕಲಿಕೆಯು ಉತ್ತಮ ದಾರಿಯಾಗಿದೆ.ಯಾವುದೇ ಖಾಯಿಲೆ ಬಂದರೂ ಅನುಭವಿಸಬಹುದು ಆದರೆ ಬಡತನದ ಖಾಯಿಲೆ ಅನುಭವಿಸಲು ಬಹಳ ಕಷ್ಟವಾಗುತ್ತದೆ. ಬಡತನದಿಂದ ಹೊರಬಂದು ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು ಎಂಬ ಉದ್ದೇಶದಿಂದ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಹೊಲಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.

ತಾಲೂಕಿನ ಹೇರೂರಿನಲ್ಲಿ ಉಚಿತ ಹೊಲಿಗೆ ತರಬೇತಿ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಡುಗೆ ಮತ್ತು ಹೊಲಿಗೆ ಇವೆರಡು ಸ್ವಾವಲಂಬಿಯಾಗಿ ಬದುಕಲು ಉತ್ತಮ ದಾರಿಯಾಗಿದೆ. ಉಚಿತ ಹೊಲಿಗೆ ತರಬೇತಿಯಲ್ಲಿ ನುರಿತ ಶಿಕ್ಷಕರು ತರಬೇತಿ ನೀಡಲಿದ್ದಾರೆ. ಹೊಲಿಗೆಯನ್ನು ಸರಿಯಾಗಿ ಕಲಿತರೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯವಿದೆ.
ಇಂತಹ‌ ತರಭೇತಿ ಶಿಬಿರಗಳಿಂದ ಸಮಾಜದಲ್ಲಿ ಸಾಮರಸ್ಯ ಬೆಳೆಯುತ್ತದೆ.‌ಆತ್ಮೀಯತೆ ಭಾಂದವ್ಯ ಬೆಳೆಯುತ್ತದೆ. ಮಹಿಳೆಯರು ಉತ್ತಮವಾಗಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗಣೇಶ ಹೇರೂರು ಹೊಲಿಗೆ ಕಲಿಯುವುದರಿಂದ ಸಾಕಷ್ಟು ಉಪಯೋಗವಿದೆ. ಒಂದು ತಿಂಗಳುಗಳ ಕಾಲ ನಡೆಯಲಿರುವ ಉಚಿತ ಹೊಲಿಗೆ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಹೊಲಿಗೆ ಯನ್ನು ಕಲಿತುಕೊಳ್ಳಬೇಕು. ಮಹಿಳೆಯರು ಉತ್ತಮವಾಗಿ ಹೊಲಿಗೆ ಕಲಿತರೆ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನವರು ಹಮ್ಮಿಕೊಂಡ ಶಿಬಿರಕ್ಕೆ ಒಂದು ಸಾರ್ಥಕತೆ ಬರುತ್ತದೆ ಎಂದರು.

ಪ್ರಮುಖರಾದ ನರಹರಿ ಮಾತನಾಡಿ, ಪ್ರಾಮಾಣಿಕವಾಗಿ ನಿಷ್ಠೆಯಿಂದ ಕೆಲಸ ಮಾಡಿದರೆ ಯಾವುದೇ ಕ್ಷೇತ್ರದಲ್ಲಾದರೂ ಯಶಸ್ಸು ನಮ್ಮದಾಗುತ್ತದೆ. ಅನಂತಮೂರ್ತಿ ಹೆಗಡೆ ಅವರು ಬಹಳ ಕಷ್ಟದಿಂದ ಬಡತನವನ್ನು ಅನುಭವಿಸಿದರು. ಆಸ್ಪತ್ರೆ ವಿಚಾರವಾಗಿ ಶಿರಸಿಯಿಂದ ಕಾರವಾರದ ವರೆಗೆ ಪಾದಯಾತ್ರೆ ನಡೆಸಿದ್ದಾರೆ. ಒಗ್ಗಟ್ಟಾಗಿ ಹೋರಾಟ ಮಾಡಿದರೆ ಜಯ ಸಿಕ್ಕೇ ಸಿಗುತ್ತದೆ. ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು ಎಂಬ ಉದ್ದೇಶದಿಂದ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಉಚಿತವಾಗಿ ಹೊಲಿಗೆ ತರಬೇತಿ ಶಿಬಿರವನ್ನು ನಡೆಸುತ್ತಿದೆ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಯುಖರಾದ , ಅಣ್ಣಪ್ಪ ಗೌಡ ,ಕಮಲಾಕರ ನಾಯ್ಕ, ಸೀತಾರಾಮ ಗೌಡ , ಬಾಲಚಂದ್ರ ಹೆಗಡೆ, ವಿಶ್ವನಾಥ ಹೆಗಡೆ, ಪ್ರದೀಪ ಹೆಗಡೆ ಹಾಗೂ ಹೊಲಿಗೆ ತರಬೇತಿ ಶಿಕ್ಷಕಿ ನಾಗರತ್ನ ಗೌಡ ಇದ್ದರು ‌

ಅನಂತಮೂರ್ತಿ ಹೆಗಡೆ ಯವರಲ್ಲಿ ಸಮಾಜಕ್ಕಾಗಿ ಏನಾದರೂ ಕೊಡಬೇಕು ಎಂಬ ಮನಸ್ಸು ಅವರಲ್ಲಿದೆ. ತನ್ನ ದುಡಿಮೆಯ ಒಂದು ಭಾಗವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟಿದ್ದಾರೆ. ಲಕ್ಷಾಂತರ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆ ಮಾಡುವಂತಾಗಲಿ.
ಎಮ್ ಜಿ ಹೆಗಡೆ ಗೆಜ್ಜೆ. ಜಿ.ಪಂ ಮಾಜಿ ಸದಸ್ಯ.