ಸುದ್ದಿ ಕನ್ನಡ ವಾರ್ತೆ

ಜೊಯಿಡಾ:  ಭಾರತೀಯ ಜನತಾ ಪಾರ್ಟಿ ಜೋಯಿಡಾ ಮಂಡಲದ ವತಿಯಿಂದ ಇಂದು, ಮಂಗಳವಾರ ದಿನಾಂಕ 29/09/2026 ರಂದು ಜೋಯಿಡಾ ತಾಲೂಕಿನ ಆಖೇತಿ ಗ್ರಾಮ ಪಂಚಾಯತದಲ್ಲಿ ‘ನಮ್ಮ ಮನೆ ನಮ್ಮ ಹಕ್ಕು’ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರು ಗ್ರಾಮ ಪಂಚಾಯತಿಗೆ ತೆರಳಿ, ಪಿ.ಡಿ.ಒ. ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದೀಪಕ ದೇಸಾಯಿ ಅವರು, ಅರಣ್ಯ, ಬೆಟ್ಟ, ಸರ್ಕಾರಿ ಭೂಮಿ, ಗ್ರಾಮಠಾಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಮನೆಗಳ ಆಸ್ತಿ ತೆರಿಗೆ ಸ್ವೀಕಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಅರಣ್ಯ, ಸರ್ಕಾರಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ, ತಲೆತಲಾಂತರಗಳಿಂದ ವಾಸಿಸುತ್ತಿರುವ ಸಾವಿರಾರು ಕುಟುಂಬಗಳಿದ್ದು, ಸರ್ಕಾರದ ಈ ಕ್ರಮದಿಂದ ಅಂತಹ ಕುಟುಂಬಗಳಿಗೆ ತೊಂದರೆಯಾಗಲಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಈ ಜನವಿರೋಧಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಪ್ರಮುಖರಾದ ಗುರಪ್ಪ ಹಣಬರ. ದೀಪಕ್‌ ದೇಸಾಯಿ, ಲಕ್ಷ್ಮಣ ದೇಸಾಯಿ. ಶ್ರೀನಾಥ ಮಲಿಕ್. ಮಹಾದೇವ ಗೌಡ. ಅಪ್ಪು ಪವಾರ್. ಕೃಷ್ಣ ಗಾಂಟ್ಕರ್. ಕೃಷ್ಣ ದೇಸಾಯಿ ಹಾಗೂ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.