ಸುದ್ಧಿಕನ್ನಡ ವಾರ್ತೆ
ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಖಾಸಗಿ ರೆಸಾರ್ಟನಲ್ಲಿ ಜೀಪ್ ಲೈನ್ ರೈಡ್ ಮಾಡುವ ಸಂದರ್ಭದಲ್ಲಿ ಜೀಪ್ ಲೈನ್ ಕೇಬಲ್ ತುಂಡಾಗಿ ವಿಜಯಪುರ ಮೂಲದ ಕುಬೇರ್ ಸುರಪುರ(24) ಎಂಬ ಪ್ರವಾಸಿಗ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ.

ಜೀಪ್ ಲೈನ್ ಕೇಬಲ್ ತುಂಡಾದ ಪರಿಣಾಮ ಪ್ರವಾಸಿಗರ ಕುಬೇರ್ ರವರು ಸುಮಾರು 40 ಅಡಿ ಆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅನಾಹುತಕ್ಕೆ ರೆಸಾರ್ಟ ನಿರ್ಲಕ್ಷ ಮತ್ತು ಸುರಕ್ಷತಾ ವೈಫಲ್ಯವೇ ಕಾರಣ ಎಂದೇ ಹೇಳಲಾಗುತ್ತಿದೆ.

ಕುಬೇರ ರವರು ಜೀಪ್ ಲೈನ್ ರೈಡ್ ಮಾಡುವ ಸಂದರ್ಭದಲ್ಲಿ ಇವರ ಸಹೋದರ ಪ್ರಶಾಂತ್ ರವರು ತಮ್ಮ ಮೊಬೈಲ್ ನಲ್ಲಿ ವೀಡಿಯೊ ರೆಕಾರ್ಡ ಮಾಡುತ್ತಿದ್ದರು. ಇದರಿಂದಾಗಿ ಈ ದುರ್ಗಟನೆಯ ವೀಡಿಯೊ ವೈರಲ್ ಆಗಿದೆ. ಕುಬೇರ್ ರವರ ಎರಡೂ ಕೈ ಮತ್ತು ಕಾಲುಗಳ ಮೂಳೆಗಳು ಮುರಿದಿವೆ ಎನ್ನಲಾಗಿದೆ. ಈಗಾಗಲೇ ಅರಿಗೆ ಹಲವು ಆಸ್ತ್ರ ಚಿಕಿತ್ಸೆ ನಡೆದಿದ್ದು ಇನ್ನೂ ಹಲವು ಚಿಕಿತ್ಸೆ ನಡೆಯಬೇಕಿದೆ ಎನ್ನಲಾಗಿದೆ.