ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಇಂದು ಶುಭ ಶುಕ್ರವಾರ ಅನಂತನ ವೃತಾಚರಣೆಯ ದಿನ , ತಾಲೂಕಿನಲ್ಲಿ ವಿಜೃಂಭಣೆಯಿಂದ ಭಕ್ತಿಯಿಂದ ಶ್ರೀ ಅನಂತ ದೇವರ ವೃತವನ್ನು ಆಚರಿಸಲಾಯಿತು.

ತಾಲೂಕಿನ ತಮ್ಮಣಿಗೆಯಲ್ಲಿ ಬೆಳಿಗ್ಗೆಯಿಂದ ಶ್ರೀ ದೇವರ ಪೂಜೆ ಪುನಸ್ಕಾರಗಳು ಆರಂಭಗೊಂಡವು. ಪ್ರತೀ ವರ್ಷ ಶ್ರೀ ಅನಂತ ದೇವರ ವೃತವನ್ನು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ದಿವಂಗತ ರಾಮಕೃಷ್ಣ ಹೆಗಡೆ ಕುಟುಂಬದವರು ಶ್ರೀ ದೇವರ ವೃತವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ರಾಮಕೃಷ್ಣ ಹೆಗಡೆ ಅವರ ಮಗ ರಾಮಚಂದ್ರ ಆರ್ ಹೆಗಡೆ ಮತ್ತು ಶ್ರೀಮತಿ ಮಹಾದೇವಿ , ರಾಮಚಂದ್ರ ಹೆಗಡೆ ದಂಪತಿಗಳು ಈ ವೃತವನ್ನು ಭಯ ಭಕ್ತಿಯಿಂದ ಆಚರಿಸುವ ಮೂಲಕ ಸಾರ್ವಜನಿಕರಿಗೂ ಸೇವೆಗೆ ಅವಕಾಶ ನೀಡಿದ್ದಾರೆ.
ರಾಮಚಂದ್ರ ಹೆಗಡೆ ದಂಪತಿಗಳು ಅವರ ಸಹೋದರರು ಈ ಕಾರ್ಯದಲ್ಲಿ ನೆರವಾಗಿದ್ದು ಗುಂದ ಸುತ್ತ ಮುತ್ತಲಿನ ಜನರು ಬಂದು ಪೂಜೆಯಲ್ಲಿ ಭಾಗವಹಿಸಿ ಮಹಾ ಪ್ರಸಾದ ಪಡೆದು ಧನ್ಯರಾದರು.
ವೆ. ಪ್ರಸನ್ನ ಭಟ್ಟರು ಪೂಜೆಯ ಸಾನಿಧ್ಯ ವಹಿಸಿದ್ದರು. ಸಾಕಷ್ಟು ಪ್ರಮಾಣದಲ್ಲಿ ಮಹಿಳೆಯರು ಭಾಗವಹಿಸಿರುವುದು ಸಹಸ್ರನಾಮ ಪಠಣ ದೇವರ ಸ್ತುತಿ ಹಾಡುವ ಮೂಲಕ ಧನ್ಯರಾದರು. ಅನೇಕ ಭಕ್ತರು ಶ್ರೀ ದೇವರಿಗೆ ಹರಕೆಗಳನ್ನು ಹೊತ್ತುಕೊಂಡ ಕಾರಣ ಅದರಿಂದ ಅವರ ಕುಟುಂಬಗಳಿಗೆ ಒಳ್ಳೆಯ ದಾಗಿರುವುದು ಇಲ್ಲಿನ ವಿಶೇಷವಾಗಿದೆ. ಮುಖ್ಯವಾಗಿ ಶಕ್ತಿ ದೇವತೆಗೆ ಬೇಡಿಕೊಂಡರೆ ಫಲಪ್ರಾಪ್ತಿ ನಿಶ್ಚಿತವಾಗಿದ್ದು ಭಕ್ತರು ಭಕ್ತಿಯಿಂದ ನಡೆದುಕೊಳ್ಳಲು ಕಾರಣವಾಗಿದೆ. ಭಕ್ತರು ಶ್ರೀ ದೇವರಿಗೆ ಫಲ ತಾ0ಬೂಲ ಗಳನ್ನು ನೀಡಿದರು ದೇವರ ಪ್ರಸಾದ ಮತ್ತು ಅನ್ನ ಪ್ರಸಾದ ಪಡೆದು ಕೊಂಡು ಭಕ್ತರು ಕೃತಾರ್ಥ್ ರಾದರು.
