ಸುದ್ದಿ ಕನ್ನಡ ವಾರ್ತೆ
ಜೊಯಿಡಾ ನೂತನ ಪಿಎಸ್ಐ ಆಗಿ ಜಗದೀಶ್ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಜೊಯಿಡಾ ಪಿಎಸ್ಐ ಆಗಿದ್ದ ಮಹೇಶ್ ಮಾಳಿ ಅವರಿಗೆ ದಾಂಡೇಲಿ ಗ್ರಾಮೀಣ ಠಾಣೆ ಗೆ ವರ್ಗಾವಣೆ ಆಗಿದೆ.
ಕಳೆದ ದಿನಾಂಕ 11.8.23 ರಿಂದ ಮಹೇಶ ಮಾಳಿ ಅವರು ಜೊಯಿಡಾ ಪಿಎಸ್ಐ ಆಗಿ ಜನಪರ ಕೆಲಸಗಳಿಂದ ಗುರುತಿಸಿಕೊಂಡಿದ್ದಾರೆ. ಪೊಲೀಸ್ ಸ್ಟೇಷನ್ ಅಂದ್ರೆ ಜನ ಹೆದರುವ ಕಾಲ ಇತ್ತು. ಆದರೆ ಮಹೇಶ್ ಮಾಳಿ ಅವರು ಪಿಎಸ್ಐ ಆದ ಮೇಲೆ ಜನತೆಯೊಂದಿಗೆ ಪ್ರೀತಿಯಿಂದ ನಡೆಯುವ ಮೂಲಕ ಜನರು ನಿರ್ಬಿಡೆಯಿಂದ ಪೊಲೀಸ್ ರೊಂದಿಗೆ ಮಾತನಾಡುವಂತಾಯಿತು. ಆ ಮೂಲಕ ಜನರು ಇಲಾಖೆಯೊಂದಿಗೆ ಸಹಬಾಳ್ವೆ ಯಿಂದ ನಡೆದುಕೊಂಡಿರುತ್ತಾರೆ.
ಇದಕ್ಕೆಲ್ಲ ಇಲಾಖೆಯ ಹಿರಿಯರ ಮಾರ್ಗದರ್ಶನದಲ್ಲಿ ಪಿಎಸ್ಐ ಮಹೇಶ್ ಮಾಳಿ ಅವರು ತಾಲೂಕಿನಲ್ಲಿ ಕಾರ್ಯ ನಿರ್ವಹಿಸಿದ್ದೆ ಕಾರಣವಾಗಿದೆ.. ಅಧಿಕಾರ ಹಸ್ತಾಂತರಿಸಿದ ಸಂದರ್ಭದಲ್ಲಿ ಮಹೇಶ ಮಾಳಿ ಅವರು ಮಾತನಾಡಿ ಜೋಯಿಡಾ ದ ಜನತೆ ನನ್ನನ್ನು ಪ್ರೀತಿಯಿಂದ ನೋಡಿದ್ದಾರೆ. ನನ್ನ ಮನೆ ಊರಿನಲ್ಲಿ ಸಿಗದ ಪ್ರೀತಿಯನ್ನು ನೀಡುವ ಮೂಲಕ ಸಹಕರಿಸಿದ್ದಾರೆ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ದಲ್ಲಿ ಕೆಲಸ ಮಾಡಿದ್ದೇನೆ, ಅವರಿಗೆ ಜೋಯಿಡಾ ಸಮಸ್ತ ಜನತೆಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ದಾಂಡೇಲಿ ಗ್ರಾಮೀಣ ಠಾಣೆಯಿಂದ ಜೊಯಿಡಾಕ್ಕೆ ಪಿಎಸ್ಐ ಆಗಿ ಬಂದಿರುವ ಜಗದೀಶ ಅವರಿಗೆ ಮಹೇಶ್ ಮಾಳಿ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ನೂತನ ಪಿಎಸ್ಐ ಜಗದೀಶ ಅವರಿಗೆ ಮತ್ತು ವರ್ಗಾವಣೆ ಆಗಿರುವ ಪಿಎಸ್ಐ ಮಹೇಶ ಮಾಳಿ ಅವರಿಗೂ ತಾಲೂಕಿನ ಜನತೆ ಅಭಿನಂದನೆ ಸಲ್ಲಿಸಿರುತ್ತಾರೆ.
ಜನರೊಂದಿಗೆ ಸಹಭಾಗಿತ್ವ ಚೆನ್ನಾಗಿರಲಿ ಎಂಬ ನಿರೀಕ್ಷೆ ಕೂಡ ಮಾಡಿದ್ದಾರೆ.
