ಸುದ್ದಿ ಕನ್ನಡ ವಾರ್ತೆ
ಜೊಯಿಡಾ: ಕನ್ನಡ ಭಾಷೆ ಸಾಹಿತ್ಯ,ಸಂಸ್ಕ್ರತಿ ಹಾಗೂ ಕಲೆಗಳ ಬಗ್ಗೆ ನನಗೆ ಅತೀವ ಆಸಕ್ತಿ ಇರುವ ಕಾರಣ ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದೇನೆ. ಕನ್ನಡಿಗರ ಸ್ವಾಭಿಮಾನದ ಸಂಸ್ಥೆಯಾದ ಸಾಹಿತ್ಯ ಪರಿಷತ್ತಿನ ಕನ್ನಡ ನಾಡು ನುಡಿಯ ಸೇವೆಗೆ ಅರ್ಥಪೂರ್ಣ ವಾಗಿ ಕಾರ್ಯ ನಿರ್ವಹಿಸಲು ತಮ್ಮ ಸಹಾಯ ಸಹಕಾರ ಅಪೇಕ್ಷಿಸುತ್ತೇನೆ ಎಂದು ಅಕಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ,ಗಡಿ ಪ್ರದೇಶ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ ಸಿ ಸೋಮಶೇಖರ ಹೇಳಿದರು.
ಅವರು ಇಂದು ಸೋಮವಾರ ಜೊಯಿಡಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ಶಿಕ್ಷಕರು ಮತ್ತು ,ಸಾಮಾಜಿಕ ಕಾರ್ಯಕರ್ತರೊಂದಿಗೆ ಸಮಾಲೊಚನಾ ಸಭೆ ನಡೆಸಿ ಮಾತನಾಡುತ್ತಿದ್ದು. ನಾನು ಈ ಹಿಂದೆ ಸರಕಾರದ ವಿವಿಧ ಇಲಾಖೆಯ ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುತ್ತೇನೆ. ಅಧಿಕಾರದ ಯಾವುದೆ ಆಸೆ ಇಲ್ಲ… ಕನ್ನಡ ಸೇವೆ ಮಾಡುವ ಮನಸು ಹೊಂದಿದ್ದು ಈ ಅವಕಾಶ ನಿಮ್ಮಿಂದ ನಿರೀಕ್ಷಿಸುತ್ತಿದ್ದೆನೆ ಎಂದರು.
ಈ ಸಂದರ್ಭದಲ್ಲಿ ಕಸಾಪ ತಾಲೂಕಾಧ್ಯಕ್ಷ ಪಾಂಡುರಂಗ ಪಟಗಾರ,ಪ್ರಾ.ಶಾ,ಶಿ ಸಂಘದ ಅದ್ಯಕ್ಷ ಯಶವಂತ ನಾಯ್ಕ, ಸಾಮಾಜಿಕ ಕಾರ್ಯಕರ್ತರಾದ ರವಿ ರೇಡ್ಕರ,ಶಾಮ ಪೋಕಳೆ,ದೇವಿದಾಸ ದೇಸಾಯಿ,ಶಿವದೇವ ದೇಸಾಯಿಸ್ವಾಮಿ ಮುಂತಾದವರು ಉಪಸ್ಥಿತದ್ದರು.
