Banner Ad

ಸುದ್ದಿ ಕನ್ನಡ ವಾರ್ತೆ

ದಾಂಡೇಲಿ:ತಾಲೂಕಿನ ಕವಯತ್ರಿ ದೀಪಾಲಿ ದೀಪಕ ಸಾಮಂತರಿಗೆ ಮಾಣಿಕ್ಯ ಪ್ರಕಾಶನ(ರಿ)ಹಾಸನ ವತಿಯಿಂದ ನವೆಂಬರ 2 ರಂದು ಭಾನುವಾರ ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಂಡಿರುವ ದಶಮಾನೋತ್ಸವ ಕಾರ್ಯಕ್ರಮ ದಲ್ಲಿ “ಹೊಯ್ಸಳ ಸಾಹಿತ್ಯ ರಾಜ್ಯ ಪ್ರಶಸ್ತಿ”ಸಹಿತ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ರಾಜ್ಯ ಹಾಗೂ ಹೊರ ರಾಜ್ಯದ 17 ಸಾಧಕರಿಗೆ 2025 ನೇ ಸಾಲಿನ ಮಾಣಿಕ್ಯ ಪ್ರಕಾಶನದ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Banner Ad

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಕೊಟ್ರೇಶ್. ಎಸ್.ಉಪ್ಪಾರ, ಟ್ರಸ್ಟಿಗಳಾದ ನಾಗರಾಜ ದೊಡ್ಡಮನಿ, ಎಚ್.ಎಸ್.ಬಸವರಾಜ,ವಾಸು ಸಮುದ್ರವಳ್ಳಿ,ದೇಸು ಆಲೂರು,ಡಾ.ಪಿ ದಿವಾಕರ ನಾರಾಯಣ,ಬೆಳಗಾವಿ ಜಿಲ್ಲಾಧ್ಯಕ್ಷೆ ಸುಶೀಲಾ ಲ.ಗುರುವ ಅವರನ್ನೊಳಗೊಂಡ ಆಯ್ಕೆ ಸಮಿತಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ವಿವಿಧ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

Banner Ad