Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ತಾಲೂಕಿನಲ್ಲಿ ಸಾಕಷ್ಟು ರೆಸಾರ್ಟ ಗಳು ಜನರನ್ನು ಆಕರ್ಷಿಸಿ ತಮ್ಮ ವ್ಯವಹಾರ ಮಾಡಿಕೊಳ್ಳುತ್ತಿವೆ. ಆದರೆ ಮೋಜು ಮಸ್ತಿ ಮಾಡಲು ಬರುವ ಪ್ರವಾಸಿಗರೇ ರೆಸಾರ್ಟ್ ಗಳಲ್ಲಿ ಎಚ್ಚರದಿಂದ ಇರಿ.

Banner Ad

 

ಕಾರಣವಿಷ್ಟೆ , ತಾಲೂಕಿನಾದ್ಯಂತ ಈಗ ಕಪ್ಪು ಚಿರತೆಗಳು ಸಾಕಷ್ಟು ವೃದ್ಧಿಸಿವೆ. ಕಾಳಿ ಹುಲಿ ಯೋಜನಾ ಪ್ರದೇಶಗಳಲ್ಲಿ ಸಾಕಷ್ಟು ದನ ಕರು ಗಳನ್ನು , ಸಾಕು ನಾಯಿ , ಬೆಕ್ಕುಗಳನ್ನು ಈ ಹುಲಿ ಜಾತಿಯ ಚಿರತೆಗಳು ನುಂಗುತ್ತಿವೆ. ಇದರಿಂದ ಸಾಮಾನ್ಯ ಜನತೆ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದಾರೆ . ಆದರೆ ಏನೂ ಮಾಡಲು ಆಗದೇ, ಚಿಂತಿತ ರಾಗಿದ್ದಾರೆ.ಸಾಕು ಪ್ರಾಣಿ ಗಳಾದ ದನ ಕರುಗಳಿಗೆ ಅರಣ್ಯ ಇಲಾಖೆ ತಮ್ಮ ಮಿತಿಯಲ್ಲಿ ಪರಿಹಾರ ಕೊಡುತ್ತಿದೆ. ಆದರೆ ಅದಕ್ಕೂ ಸಾಕಷ್ಟು ಪುರಾವೆಗಳನ್ನು ಮಾಲಕರು ನೀಡಬೇಕಾಗುತ್ತದೆ.

 

ಕಾಡಿನಲ್ಲಿ ತಪ್ಪಿಸಿಕೊಂಡು ಹುಲಿ ಅಥವಾ ಚಿರತೆ ಬಾಯಿಗೆ ಸಿಕ್ಕು ಸತ್ತ ಪ್ರಾಣಿಯ ಸರಿಯಾದ ಕಳೆ ಬರ ಸಿಗದೇ ಇದ್ದರೆ ಅರಣ್ಯ ಇಲಾಖೆಗೂ ಸಂಕಷ್ಟ ಅದೇನೆ ಇದ್ದರೂ ದೂರ ದೂರ ದಿಂದ ಬರುವ ಪ್ರವಾಸಿಗರು ರೆಸಾರ್ಟ ಗಳಲ್ಲಿ ಎಲ್ಲಿ ಬೇಕೆಂದರಲ್ಲಿ ರಾತ್ರಿ ನಿದ್ದೆ ಮಾಡುವುದು , ಫೈರ್ ಕ್ಯಾಂಪ್ ಮಾಡುವುದು ಮಾಡುತ್ತಾರೆ. ಆ ವೇಳೆಯಲ್ಲಿ ಆಹಾರಕ್ಕಾಗಿ ಓಡಾಡುವ ಚಿರತೆಗಳು ಪ್ರವಾಸಿಗರ ಮೇಲೆ ದಾಳಿ ಮಾಡುವ ಸಾಧ್ಯತೆಗಳನ್ನು ಅಲ್ಲ ಗಳೆಯುವಂತಿಲ್ಲ. ಇತ್ತೀಚಿಗೆ ದಾಂಡೇಲಿ ರೆಸಾರ್ಟ್ ಒಂದರಲ್ಲಿ ಕಪ್ಪು ಚಿರತೆ ಬಂದು ನಾಯಿಗೆ ಗಾಳ ಹಾಕಿದ ಉದಾಹರಣೆ ಇದೆ. ಜರ್ಮನ್ ಶೆಫರ್ಡ್ ನಾಯಿ ಸತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಗ್ರಾಮೀಣ ಹಳ್ಳಿ ಗಳಲ್ಲಿ ಈ ಚಿರತೆ ಗಳು ಪ್ರತಿಯೊಂದು ಮನೆಗೂ ರಾತ್ರಿ ಓಡಾಡುತ್ತಿವೆ.

 

ಇತ್ತೀಚೆಗೆ ಜೋಯಿಡಾ ದ ಅವುರ್ಲಿ ಗ್ರಾಮದಲ್ಲಿ ರಾತ್ರಿ ಮನೆಯ ಬಾಗಿಲು ತೆಗೆದ ಮಹಿಳೆಯ ಮೇಲೆ ಚಿರತೆ ಧಾಳಿ ಮಾಡಿತ್ತು, ಗಾಯಗೊಂಡ ಮಹಿಳೆ ಪ್ರಾಣಾಪಾಯ ದಿಂದ ಬದುಕುಳಿದಿದ್ದು ಆಸ್ಪತ್ರೆ ಪಾಲಾಗಿ ಆರಾಮಾಗುತ್ತಿದ್ದಾರೆ.ಏನೇ ಆದರೂ ಜೀವ ಹೋದ ಮೇಲೆ ಗಾಯಗೊಂಡ ಮೇಲೆ ಏನು ಮಾಡಿದರೇನು? ಪ್ರಯೋಜನ,ಅದಕ್ಕಾಗಿ ರೆಸಾರ್ಟ ಗಳಿಗೆ ಬೇಟಿ ನೀಡುವವರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

Banner Ad