Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಗಾವಡೆ ವಾಡದ ದಶರಥ ನಾಯ್ಕ್ ಅವರ ಮಗ ಧ್ರುವ, ಕಾಲೇಜ್ ವಿದ್ಯಾರ್ಥಿ(18) ಈತ ನಿನ್ನೆ ಗೋಕರ್ಣದಲ್ಲಿ ನೇಣು ಬಿಗಿದುಕೊಂಡು ಸತ್ತಿರುವ ಬಗ್ಗೆ ಆತನ ತಂದೆ ದಶರಥ್ ನಾಯ್ಕ್ ಗೋಕರ್ಣದಲ್ಲಿ ದೂರು ನೀಡಿದ್ದಾರೆ.

Banner Ad

ಗೋಕರ್ಣ ಪೊಲೀಸರು ದಶರಥ ನಾಯ್ಕ್ ನೀಡಿದ ದೂರಿನನ್ವಯ ಆಪಾದಿತ ರಘುವೀರ ಸ್ವಾಮಿ , (ರಿತ್ವಿಕ್) ತಂದೆ ರೂಪೇಶ್ ನಾಯ್ಕ್ ಇವರ ಮೇಲೆ ಕಾನೂನಿನ ಕ್ರಮ ಕೈಕೊಂಡಿದ್ದಾರೆ.
ಈ ಸಾವಿಗೆ ರಘುವೀರ ಸ್ವಾಮಿ ಮತ್ತು ಧ್ರುವ , ದಶರಥ ನಾಯ್ಕ್ ನಡುವೆ ನಡೆದ ಘಟನೆಗಳ ಕಾರಣವೆನೆಂದು ತಿಳಿದುಬರಬೇಕಾಗಿದೆ.

ನಿನ್ನೆ ದಿನ ಗೋಕರ್ಣದ ಅಶೋಕೆಗೆ ಗೋಮಾಂತರ ಸಮಾಜದಿಂದ ಅಶೋಕೆ ಮಠದಲ್ಲಿ ಪೂಜೆ ಇದ್ದ ಕಾರಣ ಅಲ್ಲಿಗೆ ಬಂದಿದ್ದ ರಘುವೀರ ಸ್ವಾಮಿ , ಸಂಗಡಿಗರ ಜೊತೆ ಧ್ರುವ ಕೂಡ ಬಂದಿದ್ದನು. ಈ ನಡುವೆ ಏನು ನಡೆದಿದೆ ಎಂದು ತನಿಖೆಯಿಂದ ತಿಳಿದು ಬರಬೇಕಾಗಿದ್ದು ಮಧ್ಯಾಹ್ನ 3 ರಿಂದ 3.30 ರ ನಡುವೆ ಧ್ರುವ ಅಶೋಕೆ ಯಲ್ಲಿ ಬಟ್ಟೆಯಿಂದ ನೇಣು ಬಿಗಿದುಕೊಂಡು ಸತ್ತಿದ್ದಾನೆ ಎಂದು ಹೇಳಲಾಗಿದೆ. ಏನೇ ಆದರೂ ಈ ಸಾವಿಗೆ ರಘುವೀರ ಸ್ವಾಮಿ ಇವರೇ ಕಾರಣರು ಎಂದು ದಶರಥ ನಾಯ್ಕ್ ದೂರು ನೀಡಿದ್ದು, ಗೋಕರ್ಣ ಪೊಲೀಸರು ಪ್ರಕಾರಣ ಧಾಕಲಿಸಿದ್ದಾರೆ.

ಈ ಸಾವನ್ನು ನಂಬಲು ಸಾಧ್ಯವಿಲ್ಲ, ಎಂದು ಹೆತ್ತವರು, ಹಿತೈಷಿಗಳು ಮತ್ತು ಧ್ರುವ ನ ಮಿತ್ರರು, ಸಂಕಟ ಪಡುತ್ತಿದ್ದಾರೆ.

Banner Ad