Banner Ad

ಸುದ್ದಿ ಕನ್ನಡ ವಾರ್ತೆ ಜೊಯಿಡಾ :ಗೋವಾ ದ ಕಾಂಗ್ರೆಸ್ ಮುಖಂಡ ಕೇತನ ಭಾಟಿಕರ ಅನಮೋಡ ಪಕ್ಕದ ರಸ್ತೆಯಲ್ಲಿ ಹಾವು ಕಡಿತದಿಂದ ನಿಧನರಾಗಿರುವ ಮಾಹಿತಿ ತಿಳಿದು ಬಂದಿದೆ.

ಗೋವಾ ಪೊಂಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಕರೆಸಿಕೊಂಡಿದ್ದ ಕೇತನ ಭಾಟಿಕರ(41) ಚುನಾವಣೆ ಮುಂದೂಡಿದ ಕಾರಣ ಮುಂದೆ ಸ್ಪರ್ಧಿಸುವ ಹುಮ್ಮಸಿನಲ್ಲಿದ್ದರು. ಅವರು ಗೆಲ್ಲುವ ಅಭ್ಯರ್ಥಿ ಕೂಡ ಆಗಿದ್ದರು ಎಂದು ಮೂಲ ಗಳಿಂದ ತಿಳಿದು ಬಂದಿದೆ ಕಾರಣ ನಿಮಿತ್ತ ಅವರು ಕರ್ನಾಟಕಕ್ಕೆ ಬಂದಿದ್ದರು. ದಾಂಡೇಲಿಗೆ ಬಂದಿದ್ದರು ಎಂಬ ಮಾಹಿತಿ ಕೂಡ ಇದೆ.

Banner Ad

ದಾಂಡೇಲಿ ಯಿಂದ ರಾತ್ರಿ ವೇಳೆ ಗೋವಾ ಹೋಗುವಾಗ ರಭಸದ ಮಳೆ ಕೂಡ ಇತ್ತು ಎಂದು ಹೇಳಲಾಗುತ್ತಿದೆ. ಜಗಲಬೇಟ ಅನಮೋಡ ನಡುವೆ ಸ್ವಲ್ಪ ನಿಂತ ಅವರು ಕಾರಿನಿಂದ ಕೆಳಗೆ ಇಳಿದಿದ್ದರು ಆಗ ಕಾಲಿಗೆ ಹಾವು ಕಡಿದಿದೆ. ಎಂದು ತಿಳಿದು ಬಂದಿದೆ ಅದು ನಾಗರ ಹಾವು ಎಂದು ತಿಳಿದಿದೆ ನಾಗರ ಹಾವಿನ ಕಡಿತಕ್ಕೆ ಅವರು ಒಳಗಾಗಿದ್ದು ಅವರನ್ನುಕೂಡಲೇ ಪಣಜಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಅವರು ಬದುಕುಳಿಯಲಿಲ್ಲ. ಎಂದು ತಿಳಿದಿದೆ. ಈ ಬಗ್ಗೆ ರಾಮನಗರ ಪೊಲೀಸ್ ಠಾಣೆಯಲ್ಲಿ ಕೂಡ ಯಾವುದೇ ದೂರು ದಾಖಲಾಗಿಲ್ಲ.

Banner Ad