ಸುದ್ದಿ ಕನ್ನಡ ವಾರ್ತೆ
ಜೋಯಿಡಾ :ರಾಮನಗರದ ಬಿ ಜಿ ವಿ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ ಇಂದು 2026 ನೇ ಸಾಲಿನ ವಿದ್ಯಾರ್ಥಿ ಪ್ರತಿನಿಧಿ ಗಳ ಚುನಾವಣೆ ನಡೆಯಿತು. ದೇಶದ ಚುನಾವಣೆ ಮಾದರಿಯಲ್ಲಿ ವಿದ್ಯಾರ್ಥಿಗಳಿಂದ ಮತ ಚಲಾವಣೆ ಮಾಡಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.
ವಿದ್ಯಾರ್ಥಿಗಳು ತಮ್ಮ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ತೋರಿಸಿ ಮತದಾನವನ್ನು ಮಾಡಿದರು. ನಂತರ ಮತ ಎಣಿಕೆ ಕಾರ್ಯ ನಡೆಯಿತು, ಮತ ಎಣಿಕೆ ಯಲ್ಲಿ ಆಯ್ಕೆ ಆದವರು
ಜನರಲ್ ಸೆಕ್ರೆಟರಿ ಆಗಿ ಕುಮಾರ್ ಕುನಾಲ್ ಜಾಧವ್ ಆಯ್ಕೆ ಆದರು.
ಕ್ರೀಡಾ ಪ್ರತಿನಿಧಿಯಾಗಿ ಅಯನ ದೇಸಾಯಿ,
ಪ್ರಿಯಾ ಮಿರಾಶಿ. ಸಾಂಸ್ಕೃತಿಕ ಪ್ರತಿನಿಧಿಯಾಗಿ,
ಮಿಸಾಬಿ ಶೇಕ್ ವಿದ್ಯಾರ್ಥಿನಿ ಪ್ರತಿನಿಧಿಯಾಗಿ,
ತಸಕಿನ ರಹೀಮ್ ಭಾಯಿ. ಪಿಯುಸಿ ದ್ವಿತೀಯ ವರ್ಷ ವಿದ್ಯಾರ್ಥಿ ಪ್ರತಿನಿಧಿಯಾಗಿ,
ತನಿಷ್ಕ ಕಾಳಬೈರವ ಪ್ರಥಮ ವರ್ಷ ವಿದ್ಯಾರ್ಥಿ ಪ್ರತಿನಿಧಿಯಾಗಿ ಚುನಾಯಿತರಾದರು
ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲು ಪ್ರಾಂಶುಪಾಲರು ಉಪನ್ಯಾಸಕ ವರ್ಗದವರು ಮತ್ತು ಸಿಬ್ಬಂದಿ ವರ್ಗದ ಸಹಕಾರ ನೀಡಿದರು ವಿದ್ಯಾರ್ಥಿಗಳಿಗೆ ಇದು ಒಂದು ಉತ್ತಮ, ಚುನಾವಣೆ ಮಾದರಿ ಯಾಗಿತ್ತು.
