ಸುದ್ದಿ ಕನ್ನಡ ವಾರ್ತೆ

ಜೊಯಿಡಾ: ಭಯ ಭಕ್ತಿಯಿಂದ ಆಚರಿಸುತ್ತಿರುವ ಗಣೇಶನ ಹಬ್ಬ ಇತ್ತೀಚಿನ ದಿನಗಳಲ್ಲಿ ಡಾಂ ಡೂಂ ಎನ್ನುವ ಡಿಜೆ ಹಚ್ಚಿ ಕುಣಿಯುವ ಮಟ್ಟಕ್ಕೆ ತಲುಪಿದೆ. ಇದು ಸಂಘಟಕರು ತಮ್ಮ ಪ್ರಯತ್ನದಿಂದ ಮಾಡುವ ಮತ್ತು ಹಬ್ಬಕ್ಕೆ ವಿಶೇಷ ಮೆರಗನ್ನು ತರುವ ಉದ್ದೇಶದಿಂದ ಮಾಡುವ ಕೆಲಸ ಆದರೆ ಇದರ ಜೊತೆಗೆ ಗಣೇಶನ ದೊಡ್ಡ, ದೊಡ್ಡ ಮೂರ್ತಿಗಳು ಕೂಡ ವಿವಿಧ ರೂಪಗಳಲ್ಲಿ ನಿರ್ಮಾಣವಾಗಿ ಅಧಿಕ ಬೆಲೆಗಳಿಗೆ ಮಾರಾಟ ಮಾಡುವ ಮೂಲಕ ಇಂದು ವ್ಯವಹಾರವಾಗಿ ಮಾರ್ಪಟ್ಟಿದೆ. ಪಟ್ಟಣಗಳಲ್ಲಿ ಇದು ಹೆಚ್ಚಾಗಿ ನಡೆಯುತ್ತಿದೆ.

ಆದರೆ ಗ್ರಾಮೀಣ ಭಾಗಗಳಲ್ಲಿ ಇನ್ನೂ ಕೂಡ ಗಣೇಶ ಚತುರ್ಥಿ ಎಂದರೆ ಭಯ ಭಕ್ತಿಯಿಂದ ಪೂಜಿಸಿ ಧಾರ್ಮಿಕ ವಿಧಿ ವಿಧಾನ ಗಳನ್ನು ನಡೆಸಿ ಆರಾಧಿಸುವ ಹಬ್ಬವಾಗಿದೆ. ಈ ಹಬ್ಬಗಳ ನಡುವೆ ಗಣಪತಿಯನ್ನು ಕೂಡ ಶಾಸ್ತ್ರೋತ್ಕವಾಗಿ ಮಾಡುವ ಪದ್ಧತಿ ಇದೆ. ತಮ್ಮ ಮನೆಗೆ ತಾವೇ ಗಣಪತಿ ಯನ್ನು ತಯಾರಿಸಿ ಪೂಜಿಸುವ ಪದ್ಧತಿ ಇನ್ನೂ ಇದೆ. ಗಣಪತಿಯ ತಯಾರಿಕೆ ಗಂಡಸರಿಗಷ್ಟೇ ಸೀಮಿತವಲ್ಲ. ಹೆಣ್ಣು ಮಕ್ಕಳೂ ತಯಾರಿಸಬಹುದು, ಎನ್ನುವುದನ್ನು ಇತ್ತೀಚಿಗೆ ತೋರಿಸಿಕೊಟ್ಟವರು ಗುಂದ ದ ಶ್ರೀಮತಿ ಸೀತಾ ಸುಬ್ರಾಯ ದಾನಗೇರಿ ಅವರು.
ಸೀತಾ. ಸುಬ್ರಾಯ ದಾನಗೇರಿ ಅವರು ಕವಿಗಳು ಹಾಡುಗಾರರು ಕಲಾವಿದರು, ಅವರು ಕಳೆದ 10 ವರ್ಷಗಳಿಂದ ತಮ್ಮ ಮನೆಯಲ್ಲಿ ಪೂಜಿಸುವ ಗಣಪನನ್ನು ತಾವೇ ತಯಾರಿಸಿ ಕಲಾವಿದರಿಗೆ ಮಾದರಿ ಆಗಿದ್ದಾರೆ.

 

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಸೀತಾ ದಾನಗೇರಿ ಅವರ ತವರು ಮನೆ ಯಲ್ಲಾಪುರ ತಾಲೂಕು. ಸೀತಾ ದಾನಗೇರಿ ಅವರು ಜೊಯಿಡಾ ತಾಲೂಕಿನ ನಂದಿಗದ್ದಾ ಪಂಚಾಯತದ ಬೆಡಸಗದ್ದೆ ಗ್ರಾಮದವರು. ಕೃಷಿಕರಾದ ಸುಬ್ರಾಯ ದಾನಗೇರಿ ಅವರನ್ನು ವಿವಾಹವಾಗಿದ್ದಾರೆ.ತಮ್ಮ ಮನೆಯಲ್ಲಿ ಪೂಜೆಗೆ ಗಣಪತಿ ತಯಾರಿಸುವ ಮೂಲಕ ಮಹಿಳೆಯರಿಗೆ ಮಾದರಿ ಆಗಿದ್ದಾರೆ.ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮೀತಿ ಸದಸ್ಯ ರಾಗಿರುವ,ಇವರ ಇತರ ಹವ್ಯಾಸಗಳು ಕವನ ರಚನೆ , ಹಾಡುಗಾರಿಕೆ , ಕಾರ್ಯಕ್ರಮ ಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುವದು, ಜೊತೆಗೆ ಪುಸ್ತಕ ಗಳನ್ನು ಬರೆದಿದ್ದಾರೆ. ಮಹಿಳೆಯರಿಗೆ ಆದರ್ಶರಾಗಿದ್ದಾರೆ.ತಮಗೆ ತಿಳಿದಿರುವ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳುವ ಆಧರ್ಶ ಇವರಲ್ಲಿದೆ.ಇವರು ತಮ್ಮ ಮನೆ ಕೆಲಸದ ಜೊತೆಗೆ ಇತರ ಚಟುವಟಿಕೆ ಗಳನ್ನು ನಡೆಸುತ್ತಾ ಸುಂದರ ಗಣೇಶ ನನ್ನು ನಾಳೆಯ ಪೂಜೆಗೆ ಸಿದ್ದಗೊಳಿಸಿದ್ದಾರೆ. ಸೀತಾ ದಾನಗೇರಿ ಅವರಿಗೆ ಅಭಿನಂದನೆಗಳು.