ಸುದ್ದಿ ಕನ್ನಡ ವಾರ್ತೆ

ಜೊಯಿಡಾ :ಇಂದು ಗೃಹಲಕ್ಷ್ಮಿ ದಿನಾಚರಣೆಯ ಪ್ರಯುಕ್ತ ಅಣಶಿ ಗ್ರಾಮ ಪಂಚಾಯತ್ ಕಾರ್ಯಾಲಯದ ಎದುರಿಗೆ ಸಸಿ ನೆಡುವ ಮೂಲಕ, ಗ್ರಹಲಕ್ಸ್ಮಿ ದಿನವನ್ನು ಸಂಭ್ರಮದಿಂದ ಆಚರಿಸಿದರು.

 

ತಾಲೂಕ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಪುರುಷೋತ್ತಮ ಕಾಮತ್,ಅವರು ಸೇರಿದ ಗ್ರಹಲಕ್ಸ್ಮಿ ಪಲಾನುಭವಿ ಗಳ ಸಮ್ಮುಖದಲ್ಲಿ ಮತ್ತು ಸೇರಿದ ಗಣ್ಯರ ಸಮ್ಮುಖದಲ್ಲಿ ಸಸಿ ನೆಟ್ಟರು, ಅಣಶಿ ಗ್ರಾಮ ಪಂಚಾಯತ್ ದವರು ಸಹಕಾರ ನೀಡಿದರು.

ಈ ಸಂದರ್ಭದಲ್ಲಿ ಪ್ರವೀಣ್ ನಾಯ್ಕ ಮಾಜಿ ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ ಕಾತೇಲಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಕ್ಷ್ಮಣ ಬರ್ಸೆಕರ ಹಾಗೂ ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆಯರು , ಸ್ವಸಹಾಯ ಸಂಘದಸದಸ್ಯರು,ಫಲಾನು ಭವಿಗಳು ಗ್ರಾಮಸ್ಥರು ಭಾಗಿಯಾಗಿದ್ದರು.