- ಸುದ್ದಿ ಕನ್ನಡ ವಾರ್ತೆ
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ಉಪ ಕೇಂದ್ರ ರಾಮನಗರದಲ್ಲಿ ಸಿಬಿಡಿ ಆರ್ ಸೆಟಿ ಬಜಾರ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟಕ ರಾಗಿ ಮಾರುತಿ ಪಾಟೀಲ್ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಜೋಯಿಡಾ ಇವರು ಬಂದು ಉದ್ಘಾಟಿಸಿದರು ಅಕ್ಷಯ್ ರಾವಳ್ ಸಾಮಾಜಿಕ ಕಾರ್ಯಕರ್ತರು ಹಾಜರಿದ್ದರು ಸ್ವಸಹಾಯ ಸಂಘದ ಸದಸ್ಯರಿಂದ ತಯಾರಿಸಿದ ಪದಾರ್ಥಗಳಾದ ಶೇಂಗಾ ಚಟ್ನಿ, ಕಷಾಯ ಪೌಡರ್, ಸಾಂಬಾರ್ ಪೌಡರ್, ಲಿಂಬು ಉಪ್ಪಿನಕಾಯಿ,, ವಾಟೆ ಹುಳಿ, ಗುಡ್ಡದ ನೆಲ್ಲಿಕಾಯಿ ಇತರಿ ವಸ್ತುಗಳಾದ ಅಗರಬತ್ತಿ ಪಾಕೆಟ್ ಗಳು, ಶೇಂಗಾ ಎಣ್ಣೆ, ಸನ್ ಫ್ಲವರ್ ಎಣ್ಣೆ ಮತ್ತು ಕೊಬ್ಬರಿ ಎಣ್ಣೆ ಇತ್ಯಾದಿ ವಸ್ತುಗಳಿದ್ದವು ಈ ಕಾರ್ಯಕ್ರಮವನ್ನು ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಸಿಬಿಡಿ ಆರ್ ಸೆಟ್ ವಿಸ್ತರಣಾ ಶಾಖೆ ಜೋಯಿಡಾ ಆಯೋಜಿಸಿದರು ಮನೋಹರ್ ಚವರಿಯವರ್ ಕ್ಷೇತ್ರ ಮೇಲ್ವಿಚಾರಕರು ರಾಮನಗರ ಸಹಕರಿಸಿದರು ಒಟ್ಟುರೂಪಾಯಿ ರೂ.12,850 =00 ಲಾಭದಾಯಕವಾಗಿರುತ್ತದೆ.
