Banner Ad

ಸುದ್ದಿ ಕನ್ನಡ ವಾರ್ತೆ
80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಅಬಕಾರಿ ತನಿಖಾ ಠಾಣೆ ಅನಮೋಡದಲ್ಲಿ ವಿಜೃಂಭಣೆ ಯಿಂದ ಆಚರಿಸಲಾಯಿತು, ಅನಮೋಡ ಅಬಕಾರಿ ತನಿಖಾ ಠಾಣೆ ಗೋವಾ ರಾಜ್ಯಕ್ಕೆ, ಕರ್ನಾಟಕ ರಾಜ್ಯದಿಂದ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗ ದಲ್ಲಿದೆ.ಹಲವಾರು ಅಪರಾಧ ಅಕ್ರಮ ಪ್ರಕಾರಣ ಗಳನ್ನು ಈ ಅನಮೋಡ ತನಿಖಾ ಠಾಣೆಯ ಸಿಬ್ಬಂದಿಗಳು ಕಂಡು ಹಿಡಿದು ಭೇಷ್ ಎನಿಸಿಕೊಂಡಿದ್ದಾರೆ, ಹಗಲು ರಾತ್ರಿ ಎನ್ನದೇ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ, ಈ ತನಿಖಾ ಠಾಣೆ ಯಲ್ಲಿ ಕರ್ತವ್ಯ ದ ನಡುವೆಯೂ 80 ನೇ ಸ್ವಾತಂತ್ರ್ಯ ಉತ್ಸವ ವನ್ನು ಎಲ್ಲರೂ ಸೇರಿ ಸಂಭ್ರಮ ದಿಂದ ಆಚರಿಸಿದ್ದಾರೆ, ಉಪ ನಿರೀಕ್ಷಕರಾದ ಟಿ.ಬಿ.ಮಲ್ಲಣ್ಣವರ,ರಾಷ್ಟ್ರ ದ್ವಜಾರೋಹಣ ನಡೆಸಿ ಮಾತನಾಡುತ್ತ,ದೇಶ ರಕ್ಷಣೆ ಯ ಜೊತೆಗೆ ಕರ್ತವ್ಯ ಪಾಲನೆ,ಹಾಗೂ ಜೀವನದಲ್ಲಿ ಶಿಸ್ತು ಸಯ್ಯಮ ಪಾಲನೆ ಎಷ್ಟು ಮುಖ್ಯ ಎನ್ನುವ ಕುರಿತು ಹೇಳಿದರು.

ಈ ಸಂದರ್ಭದಲ್ಲಿ, ಸಿಬ್ಬಂದಿಗಳಾದ ಸಂತೋಷ ಸುಬ್ಬಣ್ಣನವರ್, ಶ್ರೀಕಾಂತ ಜಾಧವ, ಎಂ ಎಚ್ ಅನವಟ್ಟಿ, ವಿಕ್ರಮ ಬಿಡಿಕರ್, ರಮೇಶ್ ರಾಠೋಡ, ಆನಂದ ರೆಡ್ಡಿ, ಗಜಾನ ನಾಯ್ಕ, ಈರಣ್ಣ ಗಾಳಿ ಮತ್ತು ಗೃಹರಕ್ಷಕ ಸಿಬ್ಬಂದಿಗಳು, ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿ ದೇಶ ಪ್ರೇಮ ತೋರಿಸಿದರು.

Banner Ad
Banner Ad