ಸುದ್ದಿ ಕನ್ನಡ ವಾರ್ತೆ
​​ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಶ್ರೀ ಕೃಷ್ಣಯಜುರ್ವೇದ ಪಾದ ಘನಪಾರಾಯಣ ಸತ್ರವು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಸನ್ನಿಧಿಯಲ್ಲಿ ಸಂಪನ್ನಗೊಂಡಿತು.

​ವೇದ ಪಾಠಶಾಲಾ ಸಮಾರಂಭದಲ್ಲಿ ವೇದ ಸಂರಕ್ಷಣೆ, ಅಹಿಂಸಾ ಪರಂಪರೆಯ ಜಾಗೃತಿ ಹಾಗೂ ಕೃಷ್ಣಯಜುರ್ವೇದದ ಅಧ್ಯಯನ-ಪ್ರಚಾರಕ್ಕೆ ವಿಶೇಷ ಸೇವೆ ಸಲ್ಲಿಸಿದ ವೇದ ವಿದ್ವಾಂಸರಿಗೆ ಶ್ರೀಮಠದ ವತಿಯಿಂದ ವಿಶೇಷ ಗೌರವ ಸಲ್ಲಿಸಲಾಯಿತು. ವೇ. ಬ್ರ. ಶ್ರೀ ಅಹಿಂಸಾ ಶಂಭುನಾಥ ಘನಾಪಾಠಿ (ಕೊಲಂಬೇಶ್ವರ) ಅವರನ್ನು ವೇದ ಸಂರಕ್ಷಣೆ ಮತ್ತು ಅಹಿಂಸಾ ಪರಂಪರೆಯ ಸಂವರ್ಧನೆಗೆ ನೀಡಿದ ಅನನ್ಯ ಕೊಡುಗೆಗಾಗಿ ಸನ್ಮಾನಿಸಲಾಯಿತು.

 

ಕೃಷ್ಣಯಜುರ್ವೇದ ಕ್ಷೇತ್ರದ ಅಗ್ರಗಣ್ಯ ವಿದ್ವಾಂಸರಾದ ವೇ. ಬ್ರ. ಶ್ರೀ ಮೀನಾಕ್ಷಿ ಸುಂದರಂ ಘನಾಪಾಠಿ ಅವರನ್ನು ವೇದ ಅಧ್ಯಯನ, ಬೋಧನೆ ಮತ್ತು ಪ್ರಚಾರ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಸುವರ್ಣ ಪದಕ ಹಾಗೂ ಗೌರವ ಸಮರ್ಪಣೆ ಮಾಡಲಾಯಿತು.

 

ಈ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ವೇದ ವಿದ್ವಾಂಸರು, ವಿದ್ಯಾರ್ಥಿಗಳು, ಭಕ್ತರು ಹಾಗೂ ಶ್ರೀಮಠದ ಭಕ್ತವೃಂದ ಉಪಸ್ಥಿತರಿದ್ದರು.