Banner Ad

ಸುದ್ಧಿಕನ್ನಡ ವಾರ್ತೆ

ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಎನ್ ಟಿಕೊ ಶ್ರೀ ಉಮಾಮಹೇಶ್ವರ ಭಟ್ (ಮೊಳೆಮನೆ),ಶ್ರೀಮತಿ ಶೈಲಶ್ರೀ ಉ.ಭಟ್ ರವರ ಸುಪುತ್ರಿ ಚಿ.ಸೌ.ತೇಜಸ್ವಿನಿ ಹಾಗೂ ಶ್ರೀ ಸೀತಾರಾಮ ಗಾಂವ್ಕರ್ ಹಾಗೂ ಶ್ರೀಮತಿ ತ್ರಿವೇಣಿ ಗಾಂವ್ಕರ್ ಸಾಲೇಮಕ್ಕಿ ರವರ ಸುಪುತ್ರ ಚಿ.ಗುರುಗಣೇಶ ರವರ ವಿವಾಹ ಮಹೋತ್ಸವ ಸಮಾರಂಭವು ಮೇ 3 ಭಾನುವಾರ ಬೆಳಿಗ್ಗೆ 10-36 ರ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ಯಲ್ಲಾಪುರದ ಎಪಿಎಂಸಿ ರೈತ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಜರುಗಿತು.

Banner Ad

ಅದೇ ದಿನ ಸಂಜೆ 6-40 ರ ಗೋಧೂಳಿ ಮುಹೂರ್ತದಲ್ಲಿ ವರನ ಸ್ವಗೃಹ ಯಲ್ಲಾಪುರದ ಇಡಗುಂದಿಯ ಸಾಲೆಮಕ್ಕಿಯಲ್ಲಿ ಜರುಗಿತು. ಈ ವಿವಾಹ ಸಮಾರಂಭಕ್ಕೆ ಬಂಧು-ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನೂತನ ವಧುವರರಿಗೆ ಶುಭಕೋರಿದರು.
ಸುದ್ಧಿಕನ್ನಡ ವಾಹಿನಿ ಬಳಗ ನೂತನ ವಧುವರರ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತದೆ.

Banner Ad