ಸುದ್ದಿ ಕನ್ನಡ ವಾರ್ತೆ

ಇಂದಿನ ಮಂತ್ರಿ ಮಂಡಲ ವಿಸ್ತರಣೆ ಗೆ ಉತ್ತರ ಕನ್ನಡ, ಕೋಲಾರ, ಚಿಕ್ಕ ಬಳ್ಳಾಪುರ ದ ಶಾಸಕರು, ಪ್ರಭಾವಿ ಗಳಲ್ಲ ಎಂದು ಕೈ ಬಿಟ್ಟರೇ ಅಥವಾ ಇಲ್ಲಿನ ಮತದಾರರು ಹೇಗಿದ್ದರೂ ಕಾಂಗ್ರೆಸ್ ಗೆ ಮತ ನೀಡುತ್ತಾರೆ ಎಂದು,
ಜಿಲ್ಲೆಯ ಮತದಾರರನ್ನು ತಿರಸ್ಕರಿಸಿದರೆ?????

ಅಥವಾ ಅಧಿಕಾರ ಇದ್ದಾಗ ಹೆಚ್ಚು ಹೆಚ್ಚು ಜನ ಸ್ಪಂದನೆ ಮಾಡದೇ ಇದ್ದ ಶಾಸಕರಿಗೆ ಮತ್ತು ಮಂತ್ರಿ ಯಾದರೇನೇ ಕೆಲಸ ಮಾಡುತ್ತೇನೆ ಎನ್ನುವವರಿಗೆ ಕಾಂಗ್ರೇಸ್ ಹೈಕಮಾಂಡ್ ಚಾಟಿ ಬೀಸಿದೆಯೇ, ಎಂಬ ಮಾತುಗಳು ಕೇಳಿ ಬಂದಿವೆ.

ಮಂತ್ರಿ ಮಂಡಲ ವಿಸ್ತರಣೆ ಗೆ ಕಾಂಗ್ರೇಸ್ ಹೈ ಕಮಾಂಡ್ ಕಳೆದ ಎರಡು ತಿಂಗಳು ಗಳಿಂದ ಗುಡ್ಡ ಅಗೆಯುತ್ತಲೇ ಇತ್ತು, ಇದರ ಪರಿಣಾಮ ಉತ್ತಮ ಮಂತ್ರಿ ಗಳು ಸಿಗುತ್ತಾರೆ ಎಂದು ಜನ ಬಾವಿಸಿದ್ದರು, ಆದರೆ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿದ್ಯ ಕೊಡದೇ ರಾಜಕೀಯ ಮಾಡುವ ಮೂಲಕ ಕೆಲವು ಜಿಲ್ಲೆಯ ಜನತೆಗೆ ಅನ್ಯಾಯ ಮಾಡಿದೆ. ಇದನ್ನು ಆಯಾ ಜಿಲ್ಲೆಯ ಶಾಸಕರು ಒಂದಾಗಿ ಖಂಡಿಸಿ ಹೈ ಕಮಾಂಡಿಗೆ ಬಿಸಿ ಮುಟ್ಟಿಸಿದರೆ ಮಾತ್ರ ಮತದಾರರಿಗೆ ಸಮಾಧಾನ ಇಲ್ಲ ದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ. ಶಾಸಕರಿಗೆ ಕವಡೆ ಕಿಮ್ಮತ್ತು ನೀಡದ ಹೈಕಮಾಂಡ್ ಇದ್ದರೆಷ್ಟು ಬಿಟ್ಟರೆಷ್ಟು, ಒಬ್ಬ ಶಾಸಕ ನಾಗಬೇಕಾದರೆ ಇರುವ ಶ್ರಮ ಹೈ ಕಮಾಂಡಿಗೇನು ಗೊತ್ತು ಎನ್ನುವ ಮಾತುಗಳು ಶಾಸಕರ ಅಭಿಮಾನಿ ಗಳಿಂದ ಕೇಳಿ ಬರುತ್ತಿವೆ.

 

ಮನೆಯಲ್ಲಿ ಅಪ್ಪ, ಅಮ್ಮ, ಮಗ ಎಲ್ಲರೂ, ಸಂಸದರು, ಶಾಸಕರು ಆಗುವ ಮೂಲಕ ಆ ಜಿಲ್ಲೆಯ ಉಳಿದ ಜನತೆಗೆ ಅನ್ಯಾಯ ಮಾಡಿದವರನ್ನೂ ಕರೆದು ಮಂತ್ರಿ ಮಾಡಿದರೆ ಪಕ್ಷದ ನಿಷ್ಠೆ ಪ್ರಶ್ನೆ ಯಾಗುತ್ತದೆ, ಮತ್ತು ಹೈಕಮಾಂಡ್ ಅಪಹಾಸ್ಯಕ್ಕೂ ಗುರಿಯಾಗುತ್ತದೆ.

ಅದೃಷ್ಟ ಯಾರಿಗುಂಟು ಯಾರಿಗಿಲ್ಲ ಆದರೆ ದಿಲ್ಲಿಯಲ್ಲಿ ಹೈಕಮಾಂಡ್ ಎರಡು ತಿಂಗಳಿನಿಂದ ತಿಣುಕಾಡಿ ಮಾಡಿದ್ದು ಇದೇನಾ ಎಂಬ ಮಾತುಗಳು ಕೇಳಿಬಂದಿವೆ.ಏನೇ ಇದ್ದರೂ ಪ್ರತಿ ಜಿಲ್ಲೆಗೆ ಪ್ರಾತಿನಿದ್ಯ ಕೊಡಲೇ ಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅದರ ಪರಿಣಾಮ ವನ್ನು ಜನತೆ ತೋರಿಸಿ ಕೊಡುತ್ತಾರೆ.