Banner Ad

ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ: ತಾಲೂಕಿನ ಇಡಗುಂದಿಯ ಚಿನ್ನಾಪುರ ಸೀಮೆಯ ಚಿನ್ನೇಶ್ವರ ರಾಮಲಿಂಗ ದೇವಸ್ಥಾನದ ನೂತನ ಕಟ್ಟಡದ ಶಿಲಾನ್ಯಾಸ, ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಏಪ್ರಿಲ್ 21ರಂದು ಭಜನಾ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಭಜನಾ ಕಾರ್ಯಕ್ರಮದಲ್ಲಿ ಚಿನ್ನಾಪುರ ಸೀಮೆಯ ಒಟ್ಟು ಒಂಬತ್ತು ತಂಡಗಳು ಭಜನಾ ಕಾರ್ಯಕ್ರಮ ನೆರವೇರಿಸಿದರು.

Banner Ad

ಎಪ್ರಿಲ್ 22ರಂದು ದತ್ತಣ್ಣ ಚಿಟ್ಟೆಪಾಲ್ ತಂಡದವರಿಂದ ಸಂಗೀತ ಕಾರ್ಯಕ್ರಮ, ಎಪ್ರಿಲ್ 23ರಂದು ಶ್ರೀ ಸೋಂದ ಸ್ವರ್ಣವಲ್ಲಿಯ ಸಂಸ್ಥಾನದ ಶ್ರೀ ಶ್ರೀಮದ್. ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳಿಂದ ಕಲಶ ಪ್ರತಿಷ್ಠೆ ಕಾರ್ಯಕ್ರಮ ನೆರವೇರಲಿದೆ. ಅದೇ ದಿನ ಸಂಜೆ ಮೈತ್ರಿ ಕಲಾ ಬಳಗ ತಂಡ ತೆಲಂಗಾರ ರವರಿಂದ ತಾಳಮದ್ದಲೆ, 24ರಂದು ಜಿಲ್ಲೆಯ ಸುಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನೆರವೇರಲಿದೆ.

ಪ್ರತಿದಿನವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದ್ದು ಈ ಎಲ್ಲಾ ಕಾರ್ಯಕ್ರಮಗಳಿಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Banner Ad