ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಜನ ಸ್ಥಳದಲ್ಲೇ ಸಾವು ಕಂಡ ಧಾರುಣ ಘಟನೆ ತಾಲೂಕಿನ ರಾ.ಹೆ. ಆರತಿಬೈಲ್ ಬಳಿ ಗುರುವಾರ ಬೆಳಗಿನ ಜಾವ ಸಂಭವಿಸಿದೆ.
ದಾರವಾಡದವರು ಒಂಬತ್ತು ಜನ ಕ್ರೂಷರ್ ವಾಹನದಲ್ಲಿ ಕಾರವಾರ ಕಡೆ ಪ್ರಯಾಣಿಸುತ್ತಿದ್ದರು.ಎದುರಿನಿಂದ ಬಂದ ಲಾರಿ ಮತ್ತು ಕ್ರೂಷರ ನಡುವೆ ಡಿಕ್ಕಿ ಸಂಭವಿಸಿದೆ.ಡಿಕ್ಕಿ ಹೊಡೆತಕ್ಕೆ ಕ್ರೂಷರ ಗಾಡಿ ಸಂಪೂರ್ಣ ಜಖಂಗೊಂಡಿದೆ.
ಗಟಾರಕ್ಕೆ ಹೋಗಿ ಬಿದ್ದಿದೆ.ಸ್ಥಳದಲ್ಲಿ ಆರುಮಂದಿಮೃತಪಟ್ಟ ಶಂಕೆ ಇದ್ದು ಗಂಭೀರ ಗಾಯಗೊಂಡ ಮೂವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಪೋಲಿಸರು ಸ್ಥಳದಲ್ಲಿ ಮುಕ್ಕಾಂ ಹೂಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.ಮೃತರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.ಸಾಮಾಜಿಕ ಕಾರ್ಯಕರ್ತ ಸತೀಶ ನಾಯ್ಕ ,ಬಾಲು ನಾಯ್ಕ್ ಅರಬೈಲ್ ಮತ್ತಿತರರುಪೋಲಿಸರಿಗೆ ಕಾರ್ಯಾಚರಣೆಯಲ್ಲಿ ನೆರವಾದರು
