ಪರರ ದುಡ್ಡು ಪಾಶಾಣಕ್ಕೆ ಸಮ
ತನಗೆ ಸಿಕ್ಕ ಇನ್ನಾರದ್ದೋ 50 ಸಾವಿರ ಹಣವನ್ನು ಅತ್ಯಂತ ಪ್ರಮಾಣಿಕತೆ ಯಿಂದ ಪೋಲಿಸರಿಗೆ ಒಪ್ಪಿಸಿದ ಶಿರಸಿ ಯ ಚಂದ್ರು ಮೊಗೆರ.
.
ಇಂದಿನ ಕಾಲನೇ ಹಾಗೆ ದುಡ್ಡು ಕಂಡರೇ ಹೆಣವೂ ಬಾಯಿ ಬಿಡುತ್ತೆ.ಆದರೆ ಇಲ್ಲೊಬ್ಬ ಶಿರಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಸಾಮನ್ಯ ಸಿಬ್ಬಂದಿ ಚಂದ್ರು ಮೊಗೆರ ಎಂಬುವರು ತನಗೆ ಹುಬ್ಬಳ್ಳಿ ರಸ್ತೆಯಲ್ಲಿರುವ ಹಣ್ಣಿನಅಂಗಡಿ ಎಪಿಎಂಸಿ ಕ್ರಾಸ್ ಬಳಿ ಸಿಕ್ಕ 500 ರೂ ಮುಖ ಬೆಲೆಯ 50 ಸಾವಿರ ನಗದನ್ನು ಹಿಂದೆ ಮುಂದೆ ನೋಡದೆ ನೇರವಾಗಿ ಮಾರ್ಕೆಟ್ ಪೋಲಿಸ್ ಠಾಣೆಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ .ಚಂದ್ರು ಮೊಗೆರ ಅತ್ಯಂತ ಬಡತನದಲ್ಲಿರುವ ವ್ಯಕ್ತಿ.ಇಂತಹ ಸ್ಥಿತಿಯಲ್ಲಿ ಸಿಕ್ಕ ಹಣಕ್ಕೆ ಚಂದ್ರು ಗೌರವ ನೀಡಿದ್ದಾರೆ ಅಂತಹ ಅಪರೂಪದ ವ್ಯಕ್ತಿ ಇಂತಹ ಅಪರೂಪದ ಕೆಲಸ ಮಾಡುವುದರ ಮೂಲಕ ಮಾನವಿಯತೆಗೆ ಹೊಸ ಅರ್ಥ ಕಲ್ಪಸಿದ್ದಾರೆ .
ಹಣ ಕಳೆದುಕೊಂಡವರು ಪೋಲಿಸರಿಗೆ ಇಲ್ಲವೇ ಚಂದ್ರುಮೊಗೇರ (9731325508) ಗೆ ಸಂಪರ್ಕಿಸ ಬೇಕು
