ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ಎಲೆಚುಕ್ಕಿ ರೋಗ ನಂದಿಗದ್ದಾ ಗ್ರಾಮ ಪಂಚಾಯತ ಭಾಗದಲ್ಲಿ ಮತ್ತು ತಾಲೂಕಿನಲ್ಲೂ ಬರಬಾರದು ಎಂದು ಯರಮುಖ ದೇವಸ್ಥಾನ ದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು ವೇದಮೂರ್ತಿ ಪ್ರಸನ್ನ ಭಟ್ ರ ನೇತೃತ್ವದಲ್ಲಿ ಊರಿನ ಸಮಸ್ತರು ಗಣ್ಯರು ಬಂದು ಶಂಕರ ಆಳ್ಕೆ ಪ್ರಧಾನ ಅರ್ಚಕರ ಜೊತೆಗೆ ಶ್ರೀ ಮಠ ದ ಆಶಯ ದಂತೆ ಶ್ರೀ ಸೋಮೇಶ್ವರ ದೇವರಿಗೆ ವಿಧಿ ವಿಧಾನ ಗಳನ್ನು ನಡೆಸಿದರು ಈ ಬಗ್ಗೆ ವೇದಮೂರ್ತಿ ಪ್ರಸನ್ನ ಭಟ್ ರವರು ಅಭಿಪ್ರಾಯ ಪಟ್ಟಿದ್ದು ಹೀಗೆ,, ಅತ್ಯಂತ ಸುಂದರವಾಗಿ ನಿನ್ನೆಯ ಧಾರ್ಮಿಕ ಕಾರ್ಯಕ್ರಮ ಊರಿನ ಸಮಸ್ತ ನಾಗರೀಕರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿದೆ.
ಇವತ್ತಿನ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಕರ್ತರಾದ ಅನೇಕರಿಗೆ ಧನ್ಯವಾದಗಳನ್ನು ತಿಳಿಸಲೇ ಬೇಕಾಗಿದೆ .
ಎಲೆಚುಕ್ಕಿ ರೋಗದ ಪರಿಹಾರಕ್ಕಾಗಿ ಧಾರ್ಮಿಕವಾದ ಅನುಷ್ಠಾನವನ್ನೂ ಸಹ ನಡೆಸಬೇಕು ಎನ್ನುವುದು ಶ್ರೀಮಠದ ಆದೇಶ. ಅನೇಕ ದಿನಗಳಿಂದ ಅದನ್ನು ನಡೆಸಿಕೊಳ್ಳಬೇಕು ಎನ್ನುವ ವಿಚಾರ ಇದ್ದರೂ ಸಹ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ
ಮೊರಡ ರಾಧಕ್ಕ ಅವರ ಒತ್ತಾಸೆ ಈ ಕಾರ್ಯಕ್ರಮಕ್ಕೆ ಮೂಲ ಪ್ರೇರಣೆಯಾಗಿದೆ .
ಈ ಕಾರ್ಯಕ್ರಮಕ್ಕೆ ಅನೇಕ ಮಹನೀಯರುಗಳು ಧನಸಹಾಯವನ್ನು ನೀಡುವ ಮೂಲಕ ಸಹಕರಿಸಿದ್ದೀರಿ.
ವೈದಿಕ ಪರಿಷತ್ತಿನವರು ಅತ್ಯಂತ ಪ್ರೀತಿಯಿಂದ ಶ್ರದ್ಧೆಯಿಂದ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದೀರಿ .
ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಿಗೆ ಸದಾ ಸಹಕಾರಿಯಾದ ಒಂದು ರೀತಿಯಲ್ಲಿ ದೇವಸ್ಥಾನಕ್ಕೆ ಬೆನ್ನೆಲುಬೇ ಆದ ನಂದಿಗದ್ದ ಸೇವಾ ಸಹಕಾರಿ ಸಂಘದವರು ಇವತ್ತಿನ ಕಿರಾಣಿಯ ಖರ್ಚನ್ನ ನೀಡಿರುತ್ತಾರೆ .
ಶಶಿ ಅಣ್ಣ ಹಾಗೂ ಕೃಷ್ಣಣ್ಣ ಅವರು ಅಚ್ಚುಕಟ್ಟಾಗಿ ಅಡುಗೆಯ ವ್ಯವಸ್ಥೆಯನ್ನು ಸೇವಾ ರೂಪದಲ್ಲಿ ನಿರ್ವಹಿಸುವುದರ ಜೊತೆಗೆ ತರಕಾರಿ ಖರ್ಚನ್ನು ಸಹ ನೀಡಿರುತ್ತಾರೆ.
ವೈದಿಕ ಕಾರ್ಯಕ್ರಮದ ಖರ್ಚುಗಳನ್ನ ಶ್ರೀಯುತ ರಾಮಕೃಷ್ಣ.ದಾನಗೇರಿ ಅವರ ಕುಟುಂಬ ಹಾಗೂ ದೇವಸ್ಥಾನದ ಕಾರ್ಯದರ್ಶಿಗಳಾದ ಶ್ರೀಯುತ ದತ್ತಾತ್ರೇಯ. ಹೆಗಡೆ ಅವರು ನೀಡಿರುತ್ತಾರೆ.
ದೇವರು ಮಂತ್ರಕ್ಕೆ ಒಲಿಯುತ್ತಾನೆ , ಅದಕ್ಕೂ ಹೆಚ್ಚಾಗಿ ಆಳ್ಕೆ ಶಂಕರ ಅಜ್ಜನ ಪ್ರಾರ್ಥನೆಯನ್ನು ಒಪ್ಪುತ್ತಾನೆ. ಅವರ ನಿಷ್ಠೆ ತುಂಬ ದೊಡ್ಡದು.
ಅವರು ಕಾರ್ಯಕ್ರಮದ ಯಶಸ್ಸನ್ನು ಪ್ರಾರ್ಥಿಸಿ , ರುದ್ರಾಭಿಷೇಕ ಪೂರ್ವಕವಾದ ಪೂಜೆಯನ್ನು ನೆರವೇರಿಸಿಕೊಟ್ಟಿದ್ದಾರೆ.
ಮಾತೃಮಂಡಲದವರಿಗೆ ಧನ್ಯವಾದಗಳನ್ನು ಹೇಳಬೇಕೋ , ಬೇಡವೋ , ಎನ್ನುವುದೇ ಒಂದು ಜಿಜ್ಞಾಸೆ .ಏಕೆಂದರೆ ಮಾತೃಮಂಡಲದವರು ಈ ಕಾರ್ಯಕ್ರಮಕ್ಕೆ ಸಹಕರಿಸಿದ್ದಾರೆ ಎನ್ನುವುದಕ್ಕಿಂತಲೂ ಅವರೇ ಮುಂದೆ ನಿಂತು ಈ ಕಾರ್ಯಕ್ರಮವನ್ನು ನಡೆಸಿದ್ದಾರೆ ಎಂದರೆ ಹೆಚ್ಚು ಸೂಕ್ತವಾದೀತು.
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಹಾಗೂ ಕಾರ್ಯಕ್ರಮದ ಅನಂತರ ದೇವಸ್ಥಾನದ ಸ್ವಚ್ಛತೆಯ ಜವಾಬ್ದಾರಿಯನ್ನ ವಹಿಸಿಕೊಂಡು ಅತ್ಯಂತ ಪರಿಪೂರ್ಣವಾಗಿ ಈ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.
ಹಾಗಾಗಿ ಈ ಕಾರ್ಯಕ್ರಮದಲ್ಲಿ ಆಳುಗಳಿಗೆ ಕೊಡಬೇಕಾಗಿದ್ದ ದೊಡ್ಡದಾದಂತಹ ಮೊತ್ತ ನಮಗೆ ಉಳಿಯಲಿಕ್ಕೆ ಸಾಧ್ಯವಾಗಿದೆ .
ಅಡುಗೆಗೆ ಸಹಕಾರವನ್ನು ಮಾಡುವುದರಲ್ಲೂ ಮಾಡಿದ ಅಡುಗೆಯನ್ನು ಬಡಿಸುವುದರಲ್ಲೂ ಕೂಡ ಪರಿಶ್ರಮವನ್ನು ಪಟ್ಟಿದ್ದಾರೆ.
ವೈದಿಕ ಕಾರ್ಯಕ್ರಮಕ್ಕೆ ಬೇಕಾದಂತಹ ತುಪ್ಪ, ಹಾಗೂ ಊಟಕ್ಕೆ ಬೇಕಾದಂತಹ ಹಾಲು ಮಜ್ಜಿಗೆಯನ್ನು ಎಲ್ಲರೂ ತಮ್ಮ ತಮ್ಮ ಮನೆಯಿಂದ ತಂದು ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟಿದ್ದಾರೆ .ಧನ್ವಂತರಿ ಶ್ಲೋಕ ಪಠಣ ಹಾಗೂ ಶಂಕರ ಸ್ತೋತ್ರ ಪಠಣ ವೇ ಮೊದಲಾದಂತಹ ಧಾರ್ಮಿಕ ವ್ಯವಸ್ಥೆಯಲ್ಲೂ ಕೂಡ ಪಾಲ್ಗೊಂಡು ನಡೆದಂತಹ ಧಾರ್ಮಿಕ ಕಾರ್ಯಕ್ರಮ ಇನ್ನೂ ಪುಷ್ಠಿಗೊಂಡು ಪರಿಪೂರ್ಣವಾದಂತಹ ಫಲವನ್ನ ನೀಡಲಿಕ್ಕೆ ಪ್ರಾರ್ಥಿಸಿದ್ದಾರೆ.
ವನಮಹೋತ್ಸವದ ಪರಿಕಲ್ಪನೆಯನ್ನು ಇಟ್ಟುಕೊಂಡು , ಊರ ಹಿರಿಯರ ಮೂಲಕ ಅದನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಗಾಗಿ ಊರ ಮಾತೆಯರಿಗೆ , ಅವರ ಸಂಘಟನಾ ಶಕ್ತಿಗೆ ಕೇವಲ ಧನ್ಯವಾದಗಳಷ್ಟೇ ಅಲ್ಲ ಅನಂತಾನಂತ ಪ್ರಣಾಮಗಳು. 🙏
