ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ತಾಲೂಕಿನ ಕಿರವತ್ತಿ ಸಮೀಪದ ಸೋಮಾಪುರ ದ್ಯಾಮವ್ವಾ ದೇವಸ್ಥಾನದ ಕಾಣಿಕೆ ಡಬ್ಬಿ ಕದ್ದ ಇಬ್ಬರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.

ಕಿರವತ್ತಿಯ ಜಯಂತಿನಗರದ ಗೌಸ್ ಅಲಿ ಬಾಬುಸಾಬ ಮಿಶ್ರಕೋಟಿ ಹಾಗೂ ಸೋಮನಕೊಪ್ಪದ ಅಬ್ದುಲ್ ಹಮೀದ ಸಲೀಮಸಾಬ ಬಂಧಿತರು.

ಇವರು ಕಳೆದ ಮೇ 29ರಿಂದ ಜೂನ್ 2ರ ಅವಧಿಯಲ್ಲಿ ದ್ಯಾಮವ್ವಾ ದೇವಿ ದೇವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನ ಮಾಡಿದ್ದು, ಈ ಕುರಿತು ಅರ್ಚಕ ಶ್ರೀಕಾಂತ ಮಿರಾಶಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೂರು ದಾಖಲಾಗಿ 24 ತಾಸಿನೊಳಗೆ ಇಬ್ಬರೂ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರು ವಿಚಾರಣೆ ವೇಳೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಅವರಿಂದ 29,763 ರೂ. ವಶಕ್ಕೆ ಪಡೆಯಲಾಗಿದೆ.