ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತದ ನಂದಿಗದ್ದೆ ಗುಂದ ಕ್ರಾಸ್ ನಲ್ಲಿರುವ ಸೇತುವೆಯನ್ನು ರಿಪೇರಿಗೆ ಎಂದು ತೆಗೆಯಲಾಗಿತ್ತು ಎರಡು ದಿನಗಳ ಕೆಲಸಕ್ಕೆ ವಾರ ಕಳೆದರೂ ಕೆಲಸ ನಡೆದಿಲ್ಲ ಜನತೆಗೆ ರಸ್ತೆ ಸಂಪರ್ಕವೂ ಇಲ್ಲದೆ ತುಂಬಾ ತೊಂದರೆ ಯಾಗಿದೆ.

ಬರುವ ಬಸ್ ಗಳು ಕೂಡ ಬರಲಾರದ ಸ್ಥಿತಿಯಾಗಿದೆ. ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಗುಂದ ಕ್ರಾಸ್ , ಕಿರು ಸೇತುವೆ , ಮತ್ತು ಕೈಟನಾಲಾ ಸೇತುವೆ , ಕಾನೇರಿಯಿಂದ ಉಳವಿ ಕ್ರಾಸ್ ವರೆಗಿನ ಹೊಂಡ ಬಿದ್ದಿರುವ ರಸ್ತೆಯನ್ನು ಕೂಡಲೇ ಸರಿ ಪಡಿಸಿಕೊಡಲು ಲೋಕೋಪಯೋಗಿ ಇಲಾಖೆಗೆ ಸೂಚಿಸಬೇಕು, ಎಂದು ಸಾರ್ವಜನಿಕರು ಮಾನ್ಯ ಜಿಲ್ಲಾಧಿಕಾರಿ ಗಳಿಗೆ ಆಗ್ರಹಿಸಿದ್ದಾರೆ. ಮುಂದಿನ ವಾರದಿಂದ ಮಳೆಗಾಲ ಆರಂಭವಾಗಲಿದ್ದು ಅದಕ್ಕೂ ಮೊದಲೇ ರಸ್ತೆ ಸೇತುವೆ ಕೆಲಸಗಳು ಮುಗಿದು ಬಸ್ ಬರಲು ಅನುಕೂಲವಾಗುವಂತೆ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸ ಲಾಗಿದೆ.


ಜೊಯಿಡಾ – ನಂದಿಗದ್ದೆ ಗ್ರಾಮ ಪಂಚಾಯತಿಗಳ ಗಡಿಯಲ್ಲಿರುವ ಕೈಟಾ ನಾಲ ಸೇತುವೆ ಕೆಲಸ ಭಾಗಶಃ ಮುಗಿದಿದ್ದು ಉಳಿದ ಕೆಲಸವನ್ನು ಕೂಡಲೇ ಮುಗಿಸಬೇಕಾಗಿದೆ. ಈ ಬಗ್ಗೆ ನಂದಿಗದ್ದೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಗಳಾದ ಸಹಾಯಕ ನಿರ್ದೇಶಕರು ಸಣ್ಣ ನೀರಾವರಿ ಇಲಾಖೆಯ ವಿಶ್ವಾಸ್  ಆವರನ್ನು ಮಾತನಾಡಿಸಿದಾಗ ಅವರು ಹೇಳುವಂತೆ ಈಗಾಗಲೇ ಲೋಕೋಪಯೋಗಿ ಇಲಾಖೆಯ ಎ ಇ ಇ ಅಧಿಕಾರಿ ಬಸವರಾಜ ಅವರೊಂದಿಗೆ ಮಾತನಾಡಿದ್ದೇನೆ ಕೂಡಲೇ ಕೆಲಸ ಮುಗಿಸಿ ಜನತೆಗೆ ಅನುಕೂಲವಾಗುವಂತೆ ಮಾಡಿಕೊಡಲು ತಿಳಿಸಿದ್ದೇನೆ. ನಾನು ಕೂಡ ಬದಲಿ ರಸ್ತೆಯಲ್ಲಿ ಓಡಾಡಿದ್ದೇನೆ. ಮಳೆ ಬಂದರೆ ಅಲ್ಲಿ ಓಡಾಡುವುದು ಕಷ್ಟಕರವಾಗಿದೆ.ಜನರ ಸಮಸ್ಯೆ ನನಗೆ ಅರ್ಥ ವಾಗಿದೆ ಹೀಗಾಗಿ ಲೋಕೋಪಯೋಗಿ ಇಲಾಖೆಯೊಂದಿಗೆ ಮತ್ತೆ ಮಾತನಾಡುತ್ತೇನೆ,ಕೆಲಸ ಬೇಗನೇ ಮುಗಿಸಲು ತಿಳಿಸುತ್ತೇನೆ ಎಂದು ಹೇಳಿದ್ದಾರೆ.