ಸುದ್ದಿ ಕನ್ನಡ ವಾರ್ತೆ

ಜೊಯಿಡಾ :ಗೋಹತ್ಯೆ ಮಾಡಿ ಹಿಂದೂ ಧರ್ಮದ ಜನರ ಭಾವನೆಗೆ ಧಕ್ಕೆ ಉಂಟು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೋಳುವ ಕುರಿತು ಇಂದು ಜೋಯಿಡಾ ದಲ್ಲಿ ಹಿಂದೂ ಭಾಂದವರು ತಹಸೀಲ್ದಾರ ರವರಿಗೆ ಮನವಿ ನೀಡಿ ಆಗ್ರಹಿಸಿದರು.

ಗೋ ಹತ್ಯೆ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ ದಿನ ಜೋಯಿಡಾ ತಾಲೂಕಿನ ಆವೇಡಾ ಗ್ರಾಮ ಪಂಚಾಯತಿಯ ಇಳವಾದ ರೆಡ್ಡಿ ಕ್ಯಾಂಪಿ ನಲ್ಲಿ ಅನ್ಯ ಕೋಮಿಗೆ ಸೇರಿದ ಜನರು ತಮ್ಮಮನೆಯ ಆವರಣದಲ್ಲಿ ಕಸಾಯಿಖಾನೆಯನ್ನು ಆರಂಭಿಸಿ ಗೋ ಹತ್ಯೆ ಮಾಡಿರುವ ಪ್ರಕರಣ ಕಂಡು ಬಂದಿದೆ ಇದು ಸಮಸ್ತ ಹಿಂದೂ ಬಾಂಧವರ ಭಾವನೆಗೆ ಬರೆ ಎಳೆದಂತಾಗಿದೆ. ಹಾಗೆ ಮುಜುಗರ ಪಡುವ ವಿಷಯವೇನೇಂದರೆ ಸೂಪಾ ಆಣ್ಣೆಕಟ್ಟು ನಿರ್ಮಾಣವಾಗುವ ಮೊದಲಿನಿಂದಲೂ ಇರುವಂತಹ ಹಾಗೂ ನಾವು ಆರಾಧಿಸುವ ಕಾಳೇಶ್ವರ ದೇವಸ್ತಾನದ ಪಕ್ಕದಲ್ಲಿ ಈ ಕಸಾಯಿಖಾನೆಯನ್ನು ಆರಂಭಿಸಲಾಗಿದೆ.

ಇದು ಪ್ರತಿಯೊಬ್ಬ ಹಿಂದೂವಿನ ಮನಸ್ಸಿಗೆ ನೋವು ಉಂಟು ಮಾಡಿದೆ. ಅಷ್ಟಲ್ಲದೆ ಕಸಾಯಿಖಾನೆಯಲ್ಲಿ ಉಳಿದಿರುವ ಗೋ ಕಳೆಬರಹ ( ಉಳಿದ ಮಾಂಸ, ಕರಳು ಹಾಗೂ ಎಲಬು) ಗಳನ್ನು ಕಾಳಿ ನದಿಯಲ್ಲಿ ಎಸೆಯುತ್ತಿದ್ದಾರೆ ಕಾಳಿನದಿ ಪವಿತ್ರ ನದಿಯಾಗಿದ್ದು ಲಕ್ಷಾಂತರ ಜನರಿಗೆ ಕುಡಿಯುವ ನೀರಿನ ಮೂಲವಾಗಿದೆ.ಮತ್ತೆ ಹಲವು ಪವಿತ್ರ ದೇವಸ್ತಾನಗಳಿಗೆ ಉಪಯೋಗಿಸುವಂತಹ ನೀರಾಗಿದೆ. ಹೀಗಿರುವಾಗ ಇಲ್ಲಿ ನಡೆದಿರುವ
ದುಷ್ಕೃತ್ಯದಿಂದ ಎಲ್ಲಾ ಹಿಂದೂ ಬಾಂಧವರಿಗೆ ಮನಸ್ಸಿಗೆ ನೋವು ಉಂಟಾಗಿದೆ ಪ್ರಕರಣದಲ್ಲಿ ಭಾಗಿಯಾದ ಚಾಂದ ಕುಟ್ಟಿ ಮತ್ತು ಅವನ ತಮ್ಮ ರಫಿಕ ಕುಟ್ಟಿ ಅವರ ವಿರುದ್ದ ಕಠಿಣ ಕ್ರಮ ಕೈಗೊಂಡು ಸಮಾಜದ ಸೌಹಾರ್ದತೆಯನ್ನು ಹಾಳುಮಾಡುವ ಇಂತಹವರನ್ನು ಗಡಿಪಾರು ಮಾಡಬೇಕು,ಇವರ ವಿರುದ್ಧ ಕಠಿಣ ಕ್ರಮವನ್ನು ಕೈಗೋಳದೆ ಇದ್ದಲ್ಲಿ ಜೋಯಿಡಾ ತಾಲೂಕಿನ ಸಮಸ್ತ ಹಿಂದೂ ಬಾಂದವರು ಉಗ್ರ ಪ್ರತಿಭಟನೆ ಮಾಡುತ್ತೇವೆ, ಎಂದು ಮನವಿ ಯಲ್ಲಿ ಹೇಳಲಾಗಿದೆ, ಅಲ್ಲದೇ ಉಪ ತಹಸೀಲ್ದಾರ ಸಂಜೀವ್ ಭಜಂತ್ರಿ ಅವರಿಗೆ ಮನವಿ ಪತ್ರ ನೀಡಲಾಗಿದೆ ಈ ಸಂದರ್ಭದಲ್ಲಿ ಹಿಂದೂ ಬಾಂಧವರಾದ, ಸಂತೋಷ ಸಾವಂತ್, ಅರುಣ್, ಕಾಮರೆಕಾರ, ಸುಬೆಂದು ಕಾಮತ, ಅನಿಲ್ ಪಟ್ಟೆ, ಗಜಾನನ ಭಟ್, ಗಣೇಶ್ ಹೆಗಡೆ ಕೃಷ್ಣಾ, ಸಂದೀಪ್,ಸುಭಾಸ್ ಮಾಂಜರೆಕಾರ್ ಇತರರು ಇದ್ದರು. ಈ ಕುರಿತು ರಾಮನಗರ ತಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದೆ.