ಸುದ್ದಿ ಕನ್ನಡ ವಾರ್ತೆ
ಜಿಲ್ಲೆಯ ಪ್ರತಿಷ್ಠಿತ ಮಧ್ಯವರ್ತಿ ಬ್ಯಾಂಕ್ ಕೆಡಿಸಿಸಿ ಬ್ಯಾಂಕ್ 2025-26ನೇ ಸಾಲಿನಲ್ಲಿ 27.35 ಕೋಟಿ ನಿಕ್ಕಿ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಹೇಳಿದರು.
ಶುಕ್ರವಾರ ಬ್ಯಾಂಕ್ ನ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾಹಿತಿ ನೀಡಿದರು
ಬ್ಯಾಂಕಿನ ಶೇರು ಭಂಡವಾಳವು 145.11ಕೋಟಿ ರೂ ಗಳಿಂದ 156.85ಕೋಟಿ ರೂ ಗಳಿಗೆ ಏರಿಕೆ ಕಂಡಿದೆ. ನಿಧಿಗಳು 351.44ಕೋಟಿ ಗಳಿಂದ 382.37ಕೋಟಿ ರೂಗಳಾಗಿವೆ. ಠೇವುಗಳು 3569.45ಕೋಟಿ ಗಳಿಂದ 4191.41ಕೋಟಿಗೆ ಏರಿಕೆಯಿಗಿದೆ. ಒಟ್ಟೂ ಆದಾಯ 411.27ಕೋಟಿ ರೂ ಗಳಿಗಿದೆ. ಸಾಲಬಾಕಿ 3384.85ಕೋಟಿ ರೂ ಗಳಷ್ಟಿದ್ದು ದುಡಿಯುವ ಬಂಡವಾಳ 5269.46 ಕೋಟಿ ರೂ ತಲುಪಿದೆ ಎಂದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರುಗಳು ಇದ್ದರು.
